ಪೊಲೀಸ್‌ಅಧಿಕಾರಿ ಚಂದ್ರಶೇಖರ್‌ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್‌.ಡಿ. ಕುಮಾರಸ್ವಾಮಿ ಅವರ ಬಗ್ಗೆ ಅಸಭ್ಯ ಭಾಷೆ ಬಳಸಿದ ಪೊಲೀಸ್‌ಅಧಿಕಾರಿ ಎಂ. ಚಂದ್ರಶೇಖರ್‌ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹಿಸಿ ನಡೆಸಿದ ಬೃಹತ್ ಪ್ರತಿಭಟನೆ ಯಶಸ್ವಿಯಾಗಿದೆ.

ರಾಜ್ಯಾದ್ಯಂತ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಆಯಾಯ ಜಿಲ್ಲಾಧಿಕಾರಿಗಳು, ತಾಲೂಕು ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಲಾಯಿತು. 

ಬಾಗೇಪಲ್ಲಿ-
ಬಾಗೇಪಲ್ಲಿ ತಾಲೂಕ್‌ಜೆಡಿಎಸ್‌ಘಟಕದಿಂದ ತಹಳೀಲ್ದಾರ್‌ಅವರ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲೂಕ್‌ಅಧ್ಯಕ್ಷರಾದ ಶ್ರೀ ಸೂರ್ಯನಾರಾಯಣ ರೆಡ್ಡಿ ಅವರು, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್. ನರಸಿಂಹ ನಾಯ್ಡು, ಮುಖಂಡರುಗಳಾದ ಬಾಬಾಜಾನ್‌, ವೆಂಕಟರೆಡ್ಡಿ, ಗುಂಡಿಬಂಡೆ ಅಧ್ಯಕ್ಷ

ಮಂಜುನಾಥ್‌ರೆಡ್ಡಿ, ಮುರಳಿ ಕೃಷ್ಣ, ಶ್ರೀನಿವಾಸ್‌ಗಾಂಧಿ, ನೀರಾವರಿ ಚಲಪತಿ, ಆದಿನಾರಾಯಣ ರೆಡ್ಡಿ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

ಬೆಂಗಳೂರು ಜಿಲ್ಲೆ-
ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವರೂ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಅಸಭ್ಯ ಭಾಷೆ ಬಳಸಿದ ಐಪಿಎಸ್ ಅಧಿಕಾರಿ ಎಂ. ಚಂದ್ರಶೇಖರ್‌ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ
, ಜೆಡಿಎಸ್‌ನಿಯೋಗದಿಂದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಬೆಂಗಳೂರು ನಗರದ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ಸದಸ್ಯರುಗಳಾದ ಕೆ. ಎ. ತಿಪ್ಪೇಸ್ವಾಮಿ, ಟಿ.ಎನ್‌. ಜವರೇಗೌಡ, ಟಿ.ಎ. ಶರವಣ, ಮಾಜಿ ಶಾಸಕರಾದ ಸುರೇಶ್‌ಗೌಡ, ವಿಧಾನ ಪರಿಷತ್‌ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ರಮೇಶ್‌ಗೌಡ, ತುಳಸಿ ರಾಮ್‌ಸೇರಿದಂತೆ ಹಲವು ಮುಖಂಡರು ಜೊತೆಯಲ್ಲಿದ್ದರು.

 ಜೇವರ್ಗಿ-
ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಅಸಭ್ಯ ಭಾಷೆ ಬಳಸಿರುವ ಐಪಿಎಸ್‌ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಮಾಜಿ ಶಾಸಕರು ಹಾಗೂ ಕಾರ್ಯಧ್ಯಕ್ಷರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರ ನೇತೃತ್ವದಲ್ಲಿ ಜೇವರ್ಗಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಇದೇ ವೇಳೆ ಪೊಲೀಸ್‌ಅಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಜೇವರ್ಗಿ ತಾಲೂಕಿನ ತಹಶೀಲ್ದಾರ್‌ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕ್‌ಅಧ್ಯಕ್ಷ ರೌಫ್ ಹವಲ್ದಾರ, ಹಿರಿಯ ಮುಖಂಡರಾದ ಎನ್‌. ರಮೇಶ್‌, ಶಿವನಾಂದ ದ್ಯಾಮಗೂಂಡ , ಎಸ್.ಎಸ್ ಸಲಗಾರ ಸೋನ್ನ,

ಬಸವಲಿಂಗಪ್ಪಗೌಡ ಬಿರಾದಾರ್‌, ಪುಂಡಲಿಕ್ ಗಾಯಕವಾಡ್, ಮೆಹಬೂಬ್‌ಚನ್ನೂರ, ಶರಣು ಹೊಸಮನಿ, ಚಂದ್ರಕಾಂತ ಬೆಲ್ಲದ್‌, ದೇವು ಜನಿವಾರ,

ಭೀಮರಾಯ ಜನಾವಾರ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು , ಮಹಿಳಾ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಕುಣಿಗಲ್-
ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವರಾದ  ಕುಮಾರಸ್ವಾಮಿ ಅವರ ಬಗ್ಗೆ ಅಸಭ್ಯ ಪದ ಬಳಸಿರುವ ಪೊಲೀಸ್‌ಅಧಿಕಾರಿ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ
ಮಾಜಿ ಶಾಸಕರಾದ ಡಿ. ನಾಗರಾಜಯ್ಯ ಅವರ ನೇತೃತ್ವದಲ್ಲಿ ಕುಣಿಗಲ್‌ತಾಲೂಕಿನಲ್ಲಿ  ಬೃಹತ್ ಪ್ರತಿಭಟನೆ ನಡೆಸಿ, ಪಾದಯಾತ್ರೆ ಮೂಲಕ ತಾಲೂಕ್‌ಕಚೇರಿಗೆ ತೆರಳಿ ತಹಶೀಲ್ದಾರ್‌ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ರವಿ ನಾಗರಾಜಯ್ಯ, ಜಗದೀಶ್‌ನಾಗರಾಜಯ್ಯ, ಜಿಲ್ಲಾ ಪಂಚಾಯತ್‌ಮಾಜಿ ಸದಸ್ಯ ಶಿವಣ್ಣ, ತಾಲೂಕ್‌ಪಂಚಾಯತ್‌ಮಾಜಿ ಸದಸ್ಯರುಗಳಾದ ಶಿವರಾಜು, ಜಯಣ್ಣ, ಕೃಷ್ಣಣ್ಣ,  ಲಿಯಾಕತ್‌, ನಗರಸಭೆಯ ಮಾಜಿ ಅಧ್ಯಕ್ಷ ಕೆ.ಎಲ್. ಹರೀಶ್‌, ಪಾಲಿಕೆ ಸದಸ್ಯರಾದ ಅನ್ವರ್‌ಪಾಷಾ, ನಗರಸಭೆಯ ಮಾಜಿ ಸದಸ್ಯರಾದ ಮಂಜು, ಗ್ರಾಮ ಪಂಚಾಯ್ತಿ ಅಧ್ಯಕ್ಷ ದೀಪು, ಮುಖಂಡರಾದ ವರದರಾಜು, ಪ್ರಕಾಶ್‌ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

 ಬೆಂಗಳೂರು ಮಹಾನಗರ-
ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ
ಅವರ ಬಗ್ಗೆ ಕೀಳು ಪದ ಬಳಸಿರುವ ಪೊಲೀಸ್‌ಅಧಿಕಾರಿ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಬೆಂಗಳೂರು ಮಹಾನಗರ ಘಟಕದ ಜಿಲ್ಲಾಧ್ಯಕ್ಷ ರಮೇಶ್‌ಗೌಡ ಅವರ ನೇತೃತ್ವದಲ್ಲಿ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ಸದಸ್ಯರುಗಳಾದ ಕೆ.ಎ. ತಿಪ್ಪೇಸ್ವಾಮಿ, ಟಿ.ಎನ್‌. ಜವರೇಗೌಡ, ಟಿ.ಎ. ಶರವಣ, ವಿಧಾನ ಪರಿಷತ್‌ಮಾಜಿ ಸದಸ್ಯ

ಚೌಡರೆಡ್ಡಿ ತೂಪಲ್ಲಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ, ಬೆಂಗಳೂರು ಮಹಾನಗರದ ಹಿಂದುಳಿದ ವರ್ಗಗಳ ಅಧ್ಯಕ್ಷ ತುಳಸಿರಾಮ್‌, ಪಾಲಿಕೆಯ ಮಾಜಿ ಸದಸ್ಯರಾದ ತಿಮ್ಮೇಗೌಡ ಹಾಗೂ ರಾಜ್ಯ ವಕ್ತಾರ ದೇವರಾಜು, ಪೂರ್ಣಿಮ ಗೌಡ ಹಾಗೂ ಬೆಂಗಳೂರು ಘಟಕದ ವಿವಿಧ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

- Advertisement -  - Advertisement - 
Share This Article
error: Content is protected !!
";