ಬಿಜೆಪಿಯಿಂದ ಬೃಹತ್ ಪ್ರತಿಭಟನಾ ಸಮಾವೇಶ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ನಡೆದ ಗಲಭೆ ಮತ್ತು ಫೈರಿಂಗ್ ಪ್ರಕರಣ ಘಟನೆ ಖಂಡಿಸಿ ಜನವರಿ 17ರಂದು ಬಳ್ಳಾರಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ.
ಪ್ರತಿಭಟನಾ ಸಮಾವೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್​ ಈ ಕುರಿತು ಪ್ರತಿಕ್ರಿಯಿಸಿ, ಸಮಾವೇಶದಲ್ಲಿ 15-20 ಸಾವಿರ ಜನ ಭಾಗಿಯಾಗುವ ಸಾಧ್ಯತೆ ಇದೆ. ಭದ್ರತೆಗಾಗಿ ಬೇರೆ ಜಿಲ್ಲೆಗಳಿಂದ ಅಧಿಕಾರಿಗಳು, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.

- Advertisement - 

ಇಬ್ಬರು ಎಸ್​ಪಿಗಳು, 7 ಹೆಚ್ಚವರಿ ಎಸ್​​​ಪಿಗಳು, 15 ಡಿವೈಎಸ್​ಪಿಗಳು, 55 ಸಿಪಿಐ, 122 ಪಿಎಸ್ಐ, 81 ಎಎಸ್ಐ, 1233 ಪೊಲೀಸ್ ಕಾನ್ಸ್​ಟೇಬಲ್, 171 ಮಹಿಳಾ ಪೊಲೀಸ್ ಸಿಬ್ಬಂದಿ, 500 ಹೋಮ್​ಗಾರ್ಡ್​ ಸಿಬ್ಬಂದಿ, 12 ಡಿಎಆರ್ ತುಕಡಿ, 17 ಕೆಎಸ್​ಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಈಗಾಗಲೇ ಸಮಾವೇಶದ ಆಯೋಜಕರಿಂದ ಮಾಹಿತಿ ಪಡೆದಿದ್ದು ಶಾಂತಿಯುತ ಹೋರಾಟ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಎಸ್ಪಿ ಅವರು ಹೇಳಿದ್ದಾರೆ.

 

- Advertisement - 

Share This Article
error: Content is protected !!
";