ಚಂದ್ರವಳ್ಳಿ ನ್ಯೂಸ್, ನಾಯಕನಹಟ್ಟಿ:
ಮಾನವ ಲೌಕಿಕ ಜೀವನದ ಕ್ಷಣಿಕ ಸುಖಕ್ಕಾಗಿ ಆಸೆ ಪಡದೆ ಆಧ್ಯಾತ್ಮಿಕ ಮಾರ್ಗದಿಂದ ಮಾತ್ರ ಶಾಶ್ವತ ಸುಖ-ಮನಶಾಂತಿ ಪಡೆಯಲು ಸಾಧ್ಯ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷೆ ಮಾತಾಜೀ ತ್ಯಾಗಮಯೀ ಅಭಿಪ್ರಾಯಪಟ್ಟರು.
ನಗರದ ವಿದ್ಯಾ ವಿಕಾಸ ಶಾಲೆಯ ಆವರಣದಲ್ಲಿ ನಿವೃತ್ತ ಹಿಂದಿ ಭಾಷಾ ಶಿಕ್ಷಕ ಪಿ.ಎಂ.ಶಿವಲಿಂಗಮೂರ್ತಿ ಅವರ 90ನೇ ವರ್ಷದ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ” ಆಯೋಜಿಸಿದ್ದ ವಿಶೇಷ ಸತ್ಸಂಗ ಮತ್ತು ಉಪನ್ಯಾಸ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಧ್ಯಾನಾಭ್ಯಾಸ ಮಾಡಿಸಿ ಆಶೀರ್ವಚನ ನೀಡಿದರು.
ಭಗವಂತನಿಗೆ ಸಮೀಪವಾಗಲು ನಾವು ಪ್ರಾರ್ಥನೆಯನ್ನು- ವಿವಿಧ ಸ್ತೋತ್ರಗಳ ಪಠಣವನ್ನು ಮತ್ತು ಭಗವಂತನಲ್ಲಿ ಶ್ರದ್ಧೆ-ನಂಬಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪಿ.ಎಂ.ಶಿವಲಿಂಗಮೂರ್ತಿಯವರ ಬಗ್ಗೆ ಎಂ.ಟಿ.ಮಲ್ಲಿಕಾರ್ಜುನಸ್ವಾಮಿ, ಕಾಶಿನಾಥ್, ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ, ಕೆ.ಎಂ.ತಿಪ್ಪೇಸ್ವಾಮಿ, ಕೆ.ವಿ.ರಾಮಕೃಷ್ಣರೆಡ್ಡಿ, ನಿವೃತ್ತ ತಹಶೀಲ್ದಾರ್ ಎನ್ ರಘುಮೂರ್ತಿ, ಸುಗುಣಾ ಪಿ.ಎಂ ಮಾತನಾಡಿದರು.
ಹೃದಯ ಆರೋಗ್ಯ ಕುರಿತು ಚಿತ್ರದುರ್ಗದ ಕಾರ್ಡಿಲೋಜಿಸ್ಟ್ ಡಾ.ಆರ್.ಎಸ್.ಕಾರ್ತಿಕ್ ವಿಶೇಷ ಉಪನ್ಯಾಸ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಸ್ವಾಗತ ಪರಿಚಯಿಸಿದರು. ಸ್ವಾಮಿನಾಥ ನಿರೂಪಿಸಿದರು. ಶಿಕ್ಷಕಿ ಮಂಜುಳಾ ವಂದಿಸಿದರು.
ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಎಂ ಗೀತಾ ನಾಗರಾಜ್ , ಯತೀಶ್ ಎಂ ಸಿದ್ದಾಪುರ, ಕುಮಾರಿ ಮಾನ್ಯ ಅವರಿಂದ ವಿಶೇಷ ಭಜನೆ ನಡೆಯಿತು.
ಕಾರ್ಯಕ್ರಮದಲ್ಲಿ ಶತಾಯುಷಿ ಪಿ.ಎಂ.ಬಂಡಯ್ಯಸ್ವಾಮಿ, ರೇಣುಕಾ, ವಿಲಾಸ್, ನಾಗರಾಜ್, ಹೃತಿಕ್, ಲಕ್ಷ್ಮೀ, ಪಿ.ಎಂ.ಶಿವಲಿಂಗಮೂರ್ತಿಯವರ ಮಕ್ಕಳು , ಮೊಮ್ಮಕ್ಕಳು, ಸಂಬಂಧಿಕರು, ಅಪಾರ ಶಿಷ್ಯಸಮೂಹ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

