ಗಣಿತ ಕಲಿಕಾ ಆಂದೋಲನ, ಗ್ರಾಮ ಪಂಚಾಯಿತಿ ಮಟ್ಟದ ಶಾಲಾ ಮಕ್ಕಳ ಗಣಿತ  ಸ್ಪರ್ಧೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬೆಳವಂಗಲ ಹೋಬಳಿ ಗಣಿತ ಕಲಿಕಾ ಆಂದೋಲನ ಗ್ರಾಮ ಪಂಚಾಯಿತಿ ಮಟ್ಟದ ಶಾಲಾ ಮಕ್ಕಳ ಗಣಿತ  ಸ್ಪರ್ಧೆಯನ್ನು ಹಾದ್ರೀಪುರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಾದ್ರೀಪುರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. 

 ಹಾದ್ರೀಪುರ ಪಂಚಾಯತಿ ವ್ಯಾಪ್ತಿಯ ಚಿಕ್ಕಹೆಜ್ಜಾಜ್ಜಿ, ಮಧುರನಹೊಸಹಳ್ಳಿ, ಚುಂಚೇಗೌಡನಹೊಸಹಳ್ಳಿ, ನಾರನಹಳ್ಳಿ, ಕತ್ತಾಳೆಪಾಳ್ಯ, ರಾಮೇಶ್ವರ ಗ್ರಾಮಗಳಿಂದ ಮಕ್ಕಳು ಆಗಮಿಸಿದ್ದರು.  ಪರೀಕ್ಷೆಯಲ್ಲಿ ಒಟ್ಟು 80 ಜನ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

  4ನೇ ತರಗತಿ, 5ನೇ ತರಗತಿ ಹಾಗೂ 6ನೇ ತರಗತಿ ಮಕ್ಕಳಿಗೆ ಪ್ರತ್ಯೇಕವಾಗಿ ಗಣಿತ ಕಲಿಕಾ ಸ್ಪರ್ಧೆಯನ್ನು ನಡೆಸಲಾಯಿತು.

 ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಬಹುಮಾನಗಳನ್ನು ನಗದು ರೂಪದಲ್ಲಿ, ಪ್ರಥಮ ಬಹುಮಾನ 1,000/-,  ದ್ವಿತೀಯ ಬಹುಮಾನ 750 ರೂ, ತೃತೀಯ ಬಹುಮಾನ 500 ರೂ, ರೂಪಾಯಿಗಳನ್ನು ತರಗತಿವಾರು ವಿತರಿಸಲಾಯಿತು. 

 ಈ ವೇಳೆ ಗ್ರಾಮಪಂಚಾಯತಿ ಅಧ್ಯಕ್ಷ ಸತೀಶ್ ಕುಮಾರ್ ಮಾತನಾಡಿ, ಮಕ್ಕಳು ಶಾಲಾ ಹಂತದಲ್ಲಿಯೇ ಉತ್ತಮ ವಿದ್ಯಾಭ್ಯಾಸ ಮಾಡಿ ಗ್ರಾಮಕ್ಕೆ, ದೇಶಕ್ಕೆ ಉತ್ತಮ ಹೆಸರು ತರಬೇಕು. ಸರಕಾರ ಮಕ್ಕಳ ಶಿಕ್ಷಣಕ್ಕಾಗಿ ಸಾಕಷ್ಟು ಯೋಜನೆಗಳನ್ನ ತಂದಿದೆ. ಅವುಗಳನ್ನ ಬಳಕೆ ಮಾಡಿಕೊಂಡು ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕು. ಹಾದ್ರೀಪುರ ಶಾಲೆಯಲ್ಲಿ ವ್ಯಾಸಂಗ ಮಾಡಿ ಓರ್ವ ವಿಧ್ಯಾರ್ಥಿ ಯುಪಿಎಸ್ಸಿ ಪಾಸ್ ಆಗಿ ಐಪಿಎಸ್ ಅಧಿಕಾರಿ ಆಗಿ ದೇಶ ಸೇವೆ ಮಾಡುತ್ತಿದ್ದಾರೆ. ಇದೇ ರೀತಿ ಇನ್ನಷ್ಟು ವಿಧ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಗೆ ಹೋಗಬೇಕು ಎಂದರು.

  ಗಣಿತ ಕಲಿಕಾ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಆಧ್ಯಕ್ಷ ಸತೀಶ್ ಕುಮಾರ್ ಹೆಚ್ ಜಿ, ಸದಸ್ಯರಾದ ದೇವರಾಜ್ ಸುಷ್ಮಾ, ಎಸ್ ಡಿ ಎಂ ಸಿ ಅಧ್ಯಕ್ಷ ಹನುಮಂತರಾಜು, ಉಪಾಧ್ಯಕ್ಷ ಚೆನ್ನಕೃಷ್ಣಯ್ಯ, ಮುಖ್ಯ ಶಿಕ್ಷಕರು ಎಪಿ ವಿರೂಪಾಕ್ಷಯ್ಯ, ಸಹ ಶಿಕ್ಷಕ ನಟರಾಜ್ ವಿ, ಪಂಚಾಯತಿ ವ್ಯಾಪ್ತಿಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾದ್ರೀಪುರ ಗ್ರಾಮಸ್ಥರು ಭಾಗವಹಿಸಿದ್ದರು.

 

 

- Advertisement -  - Advertisement - 
Share This Article
error: Content is protected !!
";