ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಮುರುಘಾಮಠದ ಶರಣ ಸಂಸ್ಕೃತಿ ಉತ್ಸವದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ನಡೆದ ಜಯದೇವ ಜಂಗಿ ಕುಸ್ತಿಗೆ ಎಂ.ಕೆ.ಹಟ್ಟಿಯ ಜನನಾಡಿ ಚಾರಿಟಬಲ್ ಟ್ರಸ್ಟ್‌ನಿಂದ ಮಟ್ಟಿ ಪೂಜೆ ನೆರವೇರಿಸಲಾಯಿತು.
ಅರಿಶಿಣ, ಕುಂಕುಮ, ಬಾಳೆಕಂದು ಹೂವಿನ ಹಾರಗಳಿಂದ ಮಟ್ಟಿಯನ್ನು ಸಿಂಗರಿಸಲಾಗಿತ್ತು. ಜನನಾಡಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಂ.ಎನ್.ಅನಿಲ್‌ಕುಮಾರ್, ಉಪಾಧ್ಯಕ್ಷ ಎಲ್.ಗಣೇಶ್, ಕಾರ್ಯದರ್ಶಿ ಸಿ.ಗಣೇಶ್, ಖಜಾಂಚಿ ಹೆಚ್.ಮಧು ಹಾಗೂ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

