ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಗನ್ನಾಥ ಬಳಗ ಹಾಗೂ ಸಾಂಸ್ಕೃತಿಕ ಪ್ರಕೋಷ್ಠ ನಡೆಸಿಕೊಂಡು ಬಂದಿರುವ ಮಾಸದ ಮಾಧುರ್ಯ ಕಾರ್ಯಕ್ರಮ ನೂರರ ಸಂಭ್ರಮ ಕಾರ್ಯಕ್ರಮದ ಶೋಭಾ ಯಾತ್ರೆಗೆ ಚಾಲನೆ ನೀಡಿ ಸಭಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಾಯಿತು. ಮನುಷ್ಯ ಸಮಾಜಮುಖಿ ಎನಿಸಿಕೊಳ್ಳಬೇಕಿದ್ದರೆ, ಅವನ ಮನಸ್ಸು ಸಾಂಸ್ಕೃತಿಕವಾಗಿ ಶ್ರೀಮಂತವಾಗಿರಬೇಕು, ಯಾರಲ್ಲಿ ಸಾಂಸ್ಕೃತಿಕ ಮನಸ್ಸು ಇಲ್ಲವೋ ಅವರಲ್ಲಿ ಸಾಮಾಜಿಕ ಬದ್ಧತೆಯನ್ನು ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ಸಾಂಸ್ಕೃತಿಕ ಮನಸ್ಸು ಇದ್ದರೆ ಮಾತ್ರ ನಾವು ಜನರ ಕಷ್ಟ, ಸಂಕಷ್ಟ, ನೋವು, ದುಃಖ- ದುಮ್ಮಾನಗಳನ್ನು ಆಲಿಸಲು, ಸ್ಪಂದಿಸಲು ಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.
ಪಕ್ಷದ ಪ್ರಮುಖರೆಲ್ಲರೂ ಒಡಗೂಡಿ ತಿಂಗಳಿಗೊಮ್ಮೆ ಪ್ರಥಮ ಭಾನುವಾರ ‘ಮಾಸದ ಮಾಧುರ್ಯ‘ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿಕೊಂಡು ಬಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನ ಪೂರೈಸುವ ಹೆಗ್ಗಳಿಕೆ ಹೊತ್ತಲ್ಲೇ ನಮ್ಮ ಮಾಸದ ಮಾಧುರ್ಯ ಶತ ಕಾರ್ಯಕ್ರಮಗಳನ್ನು ಪೂರೈಸುವ ಮೂಲಕ 100 ರ ಸಡಗ ತಲುಪಿದ್ದು, ಸಾವಿರದ ಸಡಗರದತ್ತ ದಾಪುಗಾಲಿಡುವಂತಾಗಲಿ ಎಂದು ಶುಭಹಾರೈಸಲಾಯಿತು ಎಂದು ವಿಜಯೇಂದ್ರ ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಉಸ್ತುವಾರಿ ಅಗರ್ ವಾಲ, ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ವಿರೋಧ ಪಕ್ಷ ನಾಯಕ ಆರ್.ಅಶೋಕ್, ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್, ಸಂಸದ ಪಿ.ಸಿ ಮೋಹನ್, ರಾಜ್ಯಸಭಾ ಸದಸ್ಯರು ಹಾಗೂ ಕಲಾವಿದ ಜಗದೀಶ್, ಸಾಂಸ್ಕೃತಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಗಣೇಶ್ ಪ್ರಸಾದ್, ಜಿಲ್ಲಾಧ್ಯಕ್ಷ ಎಸ್.ಹರೀಶ್ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

