ಚಂದ್ರವಳ್ಳಿ ನ್ಯೂಸ್, ಹರಿಹರ:
ರಾಜ್ಯದ ರೈತರ ನ್ಯಾಯಯುತವಾದ ಬೇಡಿಕೆಗಳನ್ನು ಸರ್ಕಾರ ಬೇಗನೆ ಈಡೇರಿಸಲಿ ಎಂದು ವಾಸುದೇವ ಮೇಟಿ ಬಣದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಗುಮ್ಮನೂರ್ ಬಸವರಾಜ್ ಆಶಯ ವ್ಯಕ್ತಪಡಿಸಿದರು.
ನಗರದ ರೈತ ಸಂಘದ 50 ಕ್ಕೂ ಹೆಚ್ಚು ಪುರುಷ ಮತ್ತು ಮಹಿಳಾ ಸದಸ್ಯರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಆಗಮಿಸಿ ತಾಲೂಕ ಆಡಳಿತ ಸೌಧದ ಮುಂಭಾಗದಲ್ಲಿ ಗ್ರೇಡ್2 ತಹಸಿಲ್ದಾರ್ ಸಿ.ಪುಷ್ಪವತಿಯವರಿಗೆ ರೈತರ ಏಳು ಬೇಡಿಕೆ ಗಳುಳ್ಳ ಮನವಿಯನ್ನು ಅರ್ಪಿಸಿ ಮಾತನಾಡಿದ ಅವರು, ರೈತರ ನ್ಯಾಯಯುತವಾದ ಬೇಡಿಕೆಗಳ ಪರಿಶೀಲಿಸಿ ಸರ್ಕಾರ ಬೇಗನೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಇದೆ ವೇಳೆ ಹರಿಹರ ತಾಲೂಕ ಸಮಿತಿ ಅಧ್ಯಕ್ಷ ಹೊಟ್ಟಿಗಾನಹಳ್ಳಿ ಸುನಿಲ್ ಮಾತನಾಡಿ ನಮ್ಮ ಸಂಘದಿಂದ ಮುಖ್ಯವಾಗಿ ಹರಿಹರ-ಕೊಟ್ಟೂರು ರೈಲು ಮಾರ್ಗದ ಅಕ್ಕಪಕ್ಕದ ಜಮೀನುಗಳಿಗೆ ರೈತರು ಓಡಾಡಲು ರಸ್ತೆ ಇಲ್ಲದ ಕಾರಣ ಕೃಷಿ ಚಟುವಟಿಕೆಗಳನ್ನು ಸುಲಲಿತ ವಾಗಿ ನಡೆಸಿಕೊಂಡು ಹೋಗಲು ರಸ್ತೆ ನಿರ್ಮಾಣ ಮಾಡಿಕೊಡ ಬೇಕು.
ತಾಲೂಕಿನ ಸಾರಥಿ-ಕುರುಬರಹಳ್ಳಿ ಗ್ರಾಮದಲ್ಲಿ ರೈತರ ಸುಮಾರು 600 ಎಕರೆ ಜಮೀನನ್ನು ಕೆಐಎಡಿಬಿ ಯೋಜನೆಗೆ ಭೂಸ್ವಾಧೀನ ಗೊಳಿಸಿದ್ದು ಸರಿಯಷ್ಟೆ, ಆದರೆ ಇಲ್ಲಿಯವರೆಗೆ ಅಲ್ಲಿ ಯಾವುದೇ ಕಾರ್ಖಾನೆಗಳು ಅನುಷ್ಠಾನಗೊಳ್ಳದೇ ಸದರಿ ಜಮೀನು ಖಾಲಿ ಇರುವುದರಿಂದ ಸದರಿ ಜಮೀನಿನಲ್ಲಿ ರೈತ ಮತ್ತು ಕೂಲಿ ಕಾರ್ಮಿಕ ಮಕ್ಕಳಿಗೆ ಉದ್ಯೋಗ ನಿರ್ಮಾಣ ಮಾಡಿಕೊಡಬೇಕು.
ತಾಲೂಕು ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಿಂದ ಕೃಷಿ ಉಪಕರಣಗಳಿಗೆ ಸಲ್ಲಿಸಿದ ಅರ್ಜಿಗಳನ್ನು ತ್ವರಿತ ರೀತಿಯಲ್ಲಿ ವಿಲೆವಾರಿ ಮಾಡಬೇಕು. ಅದೇರೀತಿ ಅವಶ್ಯಕತೆ ಇರುವವರಿಗೆ ಮಾತ್ರ ಕೃಷಿ ಉಪಕರಣಗಳನ್ನು ವಿತರಿಸಬೇಕೆಂದು ಮನವಿ.ರೈತರ ಜಮೀನುಗಳಲ್ಲಿ ಅಳವಡಿಸಿದ ಪಂಪ್‌ಸೆಟ್‌ಗಳಿಗೆ ಮೊದಲಿನಂತೆ ಉಚಿತ ವಿದ್ಯುತ್ ಪರಿಕರಗಳನ್ನು ವಿತರಿಸಬೇಕು.
ರೈತರು ವರ್ಷಪೂರ್ತಿ ಕಷ್ಟಪಟ್ಟು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿರುವ ಚಿಕ್ಕ ಪುಟ್ಟ ವಸ್ತುಗಳಿಗೆ ಎಂಆರ್‌ಪಿ ದರ ಇರುವಂತೆ ಕಾನೂನಾತ್ಮಕವಾಗಿ ವೈಜ್ಞಾನಿಕ ಬೆಲೆ ನಿಗದಿಪಡಿಸ ಬೇಕು.
ರಾಜ್ಯ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡಿಯಬೇಕು ಮತ್ತು ದುಗ್ಗಾವತಿಯಿಂದ ಹೊಟ್ಟೆಗಾನಹಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯನ್ನು ಸರಿಪಡಿಸಿ ಹೊಟ್ಟಿಗಾನಹಳ್ಳಿ ಗ್ರಾಮಸ್ಥರಿಗೆ ಉತ್ತಮ ಸಂಪರ್ಕ ರಸ್ತೆಯನ್ನು ನಿರ್ಮಾಣ ಮಾಡಿ ಕೊಡಬೇಕು. ಎಂದು ನಮ್ಮ ಹಕ್ಕುಗಳಿದ್ದು ಇವುಗಳನ್ನು ಕೂಡಲೇ ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸುತ್ತಿರುವಾಗಿ ತಿಳಿಸಿದರು.
ಮನವಿಗೂ ಮುಂಚೆ ನಗರದ ಫಕೀರಸ್ವಾಮಿ ಮಠದಿಂದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಮಹಾತ್ಮ ಗಾಂಧಿ ವೃತದಲ್ಲಿ ಕೆಲ ಹೊತ್ತು ಘೋಷಣೆಗಳನ್ನು ಕೂಗಿ ನಂತರ ತಾಲೂಕ ಆಡಳಿತ ಸೌಧಕ್ಕೆ ತೆರಳಿ ಮನವಿ ಅರ್ಪಿಸಿದರು.
ಪ್ರತಿಭಟನೆ ಸಮಯದಲ್ಲಿ ತಾಲೂಕು ಗೌರವಾಧ್ಯಕ್ಷ ಸಿ.ಹನುಮಂತಪ್ಪ, ತಾಲೂಕು ಗೌರವ ಕಾರ್ಯದರ್ಶಿ ಹಿರೇಬಿದರಿ ನಾಗರಾಜ್, ಹೋಬಳಿ ಮಟ್ಟದ ಕಾರ್ಯದರ್ಶಿ ಸುನಿಲ್ ಬುಳ್ಳಾ ಪುರ, ದಾವಣಗೆರೆ ತಾಲೂಕ ಅಧ್ಯಕ್ಷ ಕೆಂಚಮ್ಮನಹಳ್ಳಿ ಹನುಮಂತಪ್ಪ, ಉಪಾಧ್ಯಕ್ಷ ಕಿತ್ತೂರ್ ಹನುಮಂತಪ್ಪ,ಜಗಳೂರು ತಾಲೂಕು ಕಾರ್ಯದರ್ಶಿ ಬಿ.ಕುಮಾರ್, ಜಿಲ್ಲಾ ಕಾರ್ಯದರ್ಶಿ ಕೋಲುಕುಂಟೆ ಹುಚ್ಚಂಗಪ್ಪ,
ಹೋಬಳಿ ಘಟಕದ ಅಧ್ಯಕ್ಷ ಚಿಕ್ಕ ತೋಗಲೇರಿ ಮಲ್ಲಿಕಾರ್ಜುನ,ಪರಶುರಾಮಪ್ಪ,ಕಿರಣ್,ಕುರ್ಕಿಜಿ.ಎಂ. ಕುಬೇಂದ್ರಪ್ಪ,ಹೊಟ್ಟಿಗಾನಹಳ್ಳಿ ರಾಮಜ್ಜ, ನಾಗರಾಜ, ಕುಬೇರಪ್ಪ, ಶೇಖರಪ್ಪ, ಚಂದ್ರಪ್ಪ, ಮಾರುತಿ, ಅರುಣ್, ಕೋಲ್ಕುಂಟೆ ನಾಗರಾಜಪ್ಪ,ಡಿ.ಅಶೋಕ್ ದುಗ್ಗವತ್ತಿ, ಬುಳ್ಳಾಪುರದ ಪೀರಮ್ಮ, ಗಿರಿಜಮ್ಮ, ಗಾಯತ್ರಿ, ಯಶೋದಮ್ಮ, ಪದ್ಮಮ್ಮ, ಚಿಕ್ಕಮ್ಮ, ಕೆಂಚಮ್ಮ,ಯಶೋದಮ್ಮ ಸೇರಿದಂತೆ ತಾಲೂಕಿನ ನೂರಾರು ರೈತ ಬಾಂಧವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.