ಮಾಯಸಂದ್ರ, ಕೋಡಿಹಳ್ಳಿ-ಧರ್ಮಪುರ, ದೇವರಕೊಟ್ಟ ಹಾಗೂ ಲಕ್ಕಿಹಳ್ಳಿಯಲ್ಲಿ ವಿದ್ಯುತ್ ವಿತರಣಾ ಕೇಂದ್ರ ಆರಂಭಿಸಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು, ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ.ಸುಧಾಕರ್ ಅವರು ಹಿರಿಯೂರು ಕ್ಷೇತ್ರದಲ್ಲಿ ಹಲವು ವಿದ್ಯುತ್ ಕೇಂದ್ರಗಳ ಅಗತ್ಯದ ಕುರಿತು ಇಂಧನ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದರು.

ಇಂಧನ ಸಚಿವ ಕೆ.ಜೆ. ಜಾರ್ಜ್ ರವರೊಂದಿಗೆ ಸಭೆ ನಡೆಸಿದ ಸಚಿವ ಸುಧಾಕರ್, ಹಿರಿಯೂರು ಉಪ ವಿಭಾಗ ವ್ಯಾಪ್ತಿಯ ಬೀರೇನಹಳ್ಳಿ (ಮಾಯಸಂದ್ರ), ಕೋಡಿಹಳ್ಳಿ-ಧರ್ಮಪುರ, ದೇವರಕೊಟ್ಟ ಹಾಗೂ ಲಕ್ಕಿಹಳ್ಳಿಯಲ್ಲಿ ಉದ್ದೇಶಿತ 66/11 KV ವಿದ್ಯುತ್ ವಿತರಣಾ ಕೇಂದ್ರಗಳನ್ನು 2025-26ನೇ ಸಾಲಿನ ಕಾಮಗಾರಿ ಪಟ್ಟಿಯಲ್ಲಿ ಸೇರಿಸಬೇಕೆಂದು ಇಂಧನ ಸಚಿವರಲ್ಲಿ ಮನವಿ ಮಾಡಿದರು.

- Advertisement - 

ಮಳೆ ಬರದ ಕಾರಣ ನಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಂಕಷ್ಟ ಹಾಗೂ ರೈತರಿಗಾಗಿ ನಿರ್ವಹಿಸಬೇಕಾದ ವಿದ್ಯುತ್ ಸರಬರಾಜಿನಲ್ಲಿ ಸಂಕಷ್ಟ ಉಂಟಾಗಿದೆ.

ವಾಣಿ ವಿಲಾಸ ಸಾಗರದ ಹಿನ್ನೀರಿನಿಂದ ನಡೆಯುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೂ ವಿದ್ಯುತ್ ಸಂಪರ್ಕ ಅವಶ್ಯಕವಾಗಿದೆ.

- Advertisement - 

ಈ ಎಲ್ಲಾ ಪ್ರಸ್ತಾಪಿತ ಕೇಂದ್ರಗಳನ್ನು ತುರ್ತಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಇಂಧನ ಸಚಿವರಲ್ಲಿ ಸುಧಾಕರ್ ಮನವಿ ಮಾಡಿ ಒತ್ತಾಯಿಸಿದರು.

 

 

Share This Article
error: Content is protected !!
";