ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಏರ್ ವಾಟರ್ ಸಂಸ್ಥೆಯಿಂದ ಅನಿಲ ಘಟಕ ಸ್ಥಾಪನೆಗೆ ಆಸಕ್ತಿ #AirWater ಕಂಪನಿಯ ಹಿರಿಯ ಪ್ರತಿನಿಧಿಗಳೊಂದಿಗೆ ಭಾರತದ ಹೂಡಿಕೆ ಯೋಜನೆಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಭಾರತವನ್ನು ಪ್ರಮುಖ ಮಾರುಕಟ್ಟೆಯಾಗಿಯೂ, ಕರ್ನಾಟಕವನ್ನು ತಮ್ಮ ಆದ್ಯತೆಯ ರಾಜ್ಯವಾಗಿಯೂ ಅವರು ಪರಿಗಣಿಸಿದ್ದಾರೆ.
ಕಂಪನಿ ಶೀಘ್ರದಲ್ಲೇ ಬೆಂಗಳೂರು ಸಮೀಪ ಹೊಸ ಕೈಗಾರಿಕಾ ಅನಿಲ ಘಟಕವನ್ನು ಸ್ಥಾಪಿಸಲು ಯೋಜಿಸಿದೆ. ಜೊತೆಗೆ ಹಸುಗಳ ಸಗಣಿ ಮತ್ತು ಕಬ್ಬಿನ ತ್ಯಾಜ್ಯ ಬಳಸಿ ಬಯೋಮೀಥೇನ್ ಪೂರೈಕೆ ಸರಪಳಿಯನ್ನು ಅನ್ವೇಷಿಸಲು ಉದ್ದೇಶಿಸಿದೆ. ಈ ಹೂಡಿಕೆಗಳನ್ನು ಸುಗಮಗೊಳಿಸಲು ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದೇವೆ ಎಂದು ಸಚಿವ ಪಾಟೀಲ್ ತಿಳಿಸಿದರು.

