ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶೈಕ್ಷಣಿಕ ಕ್ರಾಂತಿಯ ಹೊಸ ಅಧ್ಯಾಯಕ್ಕೆ BLDE ಸಜ್ಜು! ಉತ್ತರ ಕರ್ನಾಟಕದ ಇತರೆ ಜಿಲ್ಲೆಗಳು | ಬೆಂಗಳೂರಿನಲ್ಲೂ ಹೊಸ ಶಾಖೆಗಳ ಆರಂಭ ಆಗಲಿವೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹೇಳಿದರು.
ಅವಿಭಜಿತ ವಿಜಯಪುರ ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಕ್ರಾಂತಿ ಸೃಷ್ಟಿಸಿರುವ #BLDE ಸಂಸ್ಥೆ, ಈಗ ತನ್ನ ಸೇವಾ ವಿಸ್ತಾರವನ್ನು ರಾಜಧಾನಿ ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಇತರೆ ಜಿಲ್ಲೆಗಳತ್ತ ವಿಸ್ತರಿಸಲು ಸಜ್ಜಾಗಿದೆ ಎಂಬ ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸವಾಗುತ್ತದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರಗಳಲ್ಲಿ ನರ್ಸಿಂಗ್, ಫಾರ್ಮಸಿ, ಎಂಜಿನಿಯರಿಂಗ್ ಇತ್ಯಾದಿ ಹೊಸ ಆರೋಗ್ಯ ವಿಜ್ಞಾನ ಕಾಲೇಜ್ ಪ್ರಾರಂಭಿಸಲು ಯೋಜನೆ ರೂಪಿಸಿದೆ. ಬೆಳೆಯುತ್ತಿರುವ ವಿಜಯಪುರ ನಗರದಲ್ಲಿ ಮತ್ತೊಂದು ಎಂಜಿನಿಯರಿಂಗ್ ಕಾಲೇಜ್ ಸ್ಥಾಪನೆಯೂ ಹರ್ಷದಾಯಕವೆನಿಸಿದೆ.
ಜ್ಞಾನ ವಿಸ್ತಾರದಿಂದ ಉತ್ತಮ ಸಮಾಜ ಸ್ಥಾಪನೆಯಾಗಿ, ಸದೃಢ ದೇಶ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಎಂ.ಬಿ ಪಾಟೀಲ್ ಹೇಳಿದರು.

