ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಸರ್ಕಾರದ ಏಕೈಕ ಜಾಹೀರಾತು ಸಂಸ್ಥೆ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಕಂಪನಿಯ ಅಧ್ಯಕ್ಷರಾದ ಸತೀಶ್ ಕೃಷ್ಣ ಸೈಲ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಂಸ್ಥೆಯ ಆರ್ಥಿಕ ವರ್ಷ ೨೦೨೩-೨೪ರ ಲಾಭಾಂಶದಿಂದ ೧ ಕೋಟಿ ರೂಪಾಯಿ ದೇಣಿಗೆಯ ಚೆಕ್ ಅನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಹಸ್ತಾಂತರಿಸಿದರು.
ಸಂಸ್ಥೆಯು ಸಾಮಾಜಿಕ ಕಳಕಳಿ ಹೊಂದಿರುವ ಧ್ಯೋತಕ ಇದಾಗಿರುವುದು. ಕೆಎಸ್‌ಎಂಸಿಎ ಸಂಸ್ಥೆಯು ಆರ್ಥಿಕ ವರ್ಷ ೨೦೨೩-೨೪ರ ಸಾಲಿನಲ್ಲಿ ರೂ.೫.೨೯ ಕೋಟಿಗಳ ಮೊತ್ತದ ಲಾಭಾಂಶ ಘೋಷಿಸಿದೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಹಾಗೂ ಕೆಎಸ್‌ಎಂಸಿಎ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಅತೀಕುಲ್ಲಾ ಶರೀಫ್, ಉಪ ಪ್ರಧಾನ ವ್ಯವಸ್ಥಾಪಕ ಪಿ.ಎಸ್. ನಂದೀಶ ಅವರು ಉಪಸ್ಥಿತರಿದ್ದರು.