ಅರ್ಥ ಪೂರ್ಣ ರಾಜ್ಯೋತ್ಸವ ಆಚರಣೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಿರಂತರ ಅನ್ನದಾಸೋಹ ಸಮಿತಿ ಸಹಯೋಗದೊಂದಿಗೆ ಚಿರಋಣಿ ಕನ್ನಡ ಹೋರಾಟ ಸಮಿತಿಯು
  ಶಾಲಾ ಮಕ್ಕಳೊಂದಿಗೆ 69ನೇ ಕನ್ನಡ ರಾಜ್ಯೋತ್ಸವ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿತು.

 ತಾಲೂಕಿನ ದರ್ಗಾ ಜೋಗಹಳ್ಳಿ  ಗ್ರಾಮದ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಪಾಲ್ಗೊಂಡು  ಕನ್ನಡ ನಾಡು ನುಡಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶಾಲಾ ಮಕ್ಕಳೊಂದಿಗೆ ಧ್ವಜಾರೋಹಣ ಮಾಡಿಮಕ್ಕಳಿಗೆ ನೋಟ್ ಬುಕ್  ಹಾಗೂ ಸಿಹಿ ವಿತರಣೆ ಮಾಡುವ ಮೂಲಕ ಸಂಭ್ರಮಿಸಲಾಯಿತು.

 ಕಾರ್ಯಕ್ರಮದಲ್ಲಿ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ಸಂಸ್ಥಾಪಕ ರವಿ ಮಾವಿನಕುಂಟೆ ಮಾತನಾಡಿ ಈ ವರ್ಷದ ಕಾರ್ಯಕ್ರಮವನ್ನು ವಿಶೇಷವಾಗಿ ಮಕ್ಕಳೊಂದಿಗೆ ಆಚರಿಸಿರುವುದು ಸಂತಸ ತಂದಿದೆ, ಪ್ರತಿ ಬಾರಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಶೇಷವಾಗಿ ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ಇಂದಿನ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಟ್ಟ ಮಲ್ಲೇಶ್ ಮತ್ತು ತಂಡಕ್ಕೆ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು. 

 ಕನ್ನಡದ ಮೇಲಿನ ಅಭಿಮಾನ ಕೇವಲ ನವೆಂಬರ್  ತಿಂಗಳಿಗೆ ಸೀಮಿತವಾಗದಂತೆ ಕನ್ನಡದ ಉತ್ಸವ ಪ್ರತಿನಿತ್ಯ ನಡೆಯಬೇಕಿದೆ, ನಮ್ಮ ಸಂಘಟನೆಯು  ನಾಡು ನುಡಿಯ  ವಿಚಾರವಾಗಿ ಸದಾ ಹೋರಾಟಕ್ಕೆ ಸಿದ್ಧವಿದ್ದು , ಹೋರಾಟದ ಜೊತೆ ಜೊತೆಗೆ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ಸಹ ನೀಡುತ್ತಿರುವುದು ವಿಶೇಷವಾಗಿದೆ . ಸಂಘಟನೆಯ ರಾಜ್ಯಾಧ್ಯಕ್ಷ  ಸುಬ್ರಮಣ್ಯ ಅವರ ಹುಟ್ಟುಹಬ್ಬವನ್ನು  ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಆಚರಿಸುತ್ತಿರುವುದು  ಬಹಳ ಸಂತೋಷ ಮೂಡಿಸಿದೆ  ಎಂದರು.

  ರಾಜ್ಯೋತ್ಸವದ ಅಂಗವಾಗಿ ರಸ ಸಂಜೆ ಕಾರ್ಯಕ್ರಮವನ್ನು  ಆಯೋಜನೆ ಮಾಡಿದ್ದು , ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು.

 ಕಾರ್ಯಕ್ರಮದಲ್ಲಿ ಖ್ಯಾತ ವಕೀಲರು ಸಮಿತಿಯ ಸಂಸ್ಥಾಪಕ ರವಿ ಮಾವಿನ ಕುಂಟೆ, ರಾಜ್ಯಾಧ್ಯಕ್ಷ ಸುಬ್ರಮಣಿ, ಕಾಂಗ್ರೆಸ್ ಮುಖಂಡರಾದ ವೆಂಕಟೇಶ್ (ಅಪ್ಪಿ ), ಸ್ಥಳೀಯ ಮುಖಂಡರು ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಜೆ ವೈ ಮಲಣ್ಣ, ಅನ್ನದಾಸೋಹಿ ಮಲ್ಲೇಶ್, ಶ್ರೀರಾಮ್, ಮುನೀರ್ ಖಾನ್, ಫಾರ್ದಿನ್ ಖಾನ್, ಗ್ರಾಮ ಪಂಚಾಯತಿ ಸದಸ್ಯ, ಜಿ. ರಂಗಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

 

- Advertisement -  - Advertisement - 
Share This Article
error: Content is protected !!
";