ಕ ಮ ರವಿಶಂಕರ್, ಹರಿಯಬ್ಬೆ ಹೆಂಜಾರಪ್ಪ, ದಿನೇಶ್ ಇವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಘೋಷಣೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ವಾರ್ಷಿಕ ಪ್ರಶಸ್ತಿಗಳು ಪ್ರಕಟವಾಗಿದ್ದು ಚಿತ್ರದುರ್ಗ ಜಿಲ್ಲೆಯಿಂದ ಅತ್ಯಂತ ಹಿರಿಯ ಪತ್ರಕರ್ತರಾದ ಕಮ ರವಿಶಂಕರ್, ಹರಿಯಬ್ಬೆ ಸಿ.ಹೆಂಜಾರಪ್ಪ, ದಿನೇಶ್ ಗೌಡಗೆರೆ ಇವರಿಗೆ 2023-24ನೇ ಸಾಲಿನ ಜೀವಮಾನದ ಸಾಧನೆಯ ವಿಶೇಷ ಪ್ರಶಸ್ತಿಗಳು ಲಭ್ಯವಾಗಿವೆ .

ಸಿ.ಹೆಂಜಾರಪ್ಪ, ಹರಿಯಬ್ಬೆ, ಪತ್ರಕರ್ತರು ಇವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿ, ಚಿತ್ರದುರ್ಗ ಎಸ್ ಜೆಎಂ ಕಾಲೇಜಿನಲ್ಲಿ ಪಿಯುಸಿ, ನಂತರ ಪದವಿ ಶಿಕ್ಷಣವನ್ನು ಪಡೆದಿದ್ದಾರೆ. ನಂತರ ಇವರು ಕುವೆಂಪು ವಿಶ್ವ ವಿದ್ಯಾಲಯದ ದಾವಣಗೆರೆಯಲ್ಲಿ ಸ್ನಾತಕೋತ್ತರ ಪದವಿ ಪದೆಡಿದರು. ಇದಾದ ನಂತರ ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.   

2024ನೇ ಸಾಲಿನ ಚಿತ್ರದುರ್ಗ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಹೆಂಜಾರಪ್ಪ ಇವರು ಪಿಯುಸಿ ಓದುವ ಸಂದರ್ಭದಲ್ಲೇ ಪತ್ರಿಕಾ ರಂಗದ ನಂಟು ಬೆಳೆಸಿಕೊಂಡಿದ್ದರು. 1083-85ರ ಅವಧಿಯಲ್ಲಿ ಚಿತ್ರದುರ್ಗದಿಂದ ಪ್ರಕಟವಾಗುತ್ತಿದ್ದ ವೀರಾಗ್ರಣಿ ಪತ್ರಿಕೆಯ ಸಂಪಾದಕರಾದ ಕೆಳಗೋಟೆ ಶ್ರೀನಿವಾಸ್ ಇವರ ನೆರಳಿನಲ್ಲಿ ಪತ್ರಿಕಾ ಸಂಪರ್ಕ ಹೊಂದಿದ್ದರು. ಪತ್ರಿಕೋದ್ಯಮದ ನಂಟು ಆರಂಭವಾಗಿದ್ದು ಮಳೆ ಜೋಡಿಸುವ ಸಂದರ್ಭದಲ್ಲಿ, ಅಂದು ಇಂದಿನಿಂತೆ ಆಧುನಿಕ ತಂತ್ರಜ್ಞಾನ ಮೇಳೈಸದೆ ಇರುವಂತ ಸಂದರ್ಭದಲ್ಲಿ ಮಳೆ(ಪಿನ್) ಜೋಡಿಸುವ ಕಾಲದಿಂದಲೂ ನಂಟು ಬೆಳೆಸಿಕೊಂಡು ಹಂತ ಹಂತವಾಗಿ ಮೇಳೆ ಬಂದಿದ್ದಾರೆ.

ಓದು, ದುಡಿಮೆ ಜೊತೆಯಲ್ಲಿ ಪತ್ರಿಕೆಯ ನಂಟು ಇವರನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಹಿರಿಯೂರು ವಾರ ಪತ್ರಿಕೆಯಲ್ಲಿ ಸಣ್ಣ ಸಣ್ಣ ಸುದ್ದಿಗಳನ್ನು ಬೆರೆಯುತ್ತಿದ್ದ ಇವರು 2000 ದಶಕದಲ್ಲಿ ಕನ್ನಡ ಪ್ರಭು ಪತ್ರಿಕೆಯ ಹಿರಿಯೂರು ತಾಲೂಕು ವರದಿಗಾರರಾಗಿ ಫುಲ್ ಟೈಂ ಪತ್ರಕರ್ತರ ವೃತ್ತಿ ಆರಂಭಿಸಿದರು.

2011ರಿಂದ ಉದಯವಾಣಿ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಸೇವೆ ಆರಂಭಿಸಿ 2019ರ ಜುಲೈ ಅಂತ್ಯದ ವರೆಗೆ ಸೇವೆ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಚಂದ್ರವಳ್ಳಿ ಪ್ರಾದೇಶಿಕ ಕನ್ನಡ ದಿನ ಪತ್ರಿಕೆಯ ಸಂಪಾದಕರಾಗಿದ್ದಾರೆ.

ಈ ಸಂದರ್ಭದಲ್ಲಿ ಇವರು ಬರೆದ ಭದ್ರಾ ನಿದ್ರೆ ಎನ್ನವು ಸರಣಿ ಲೇಖನ ನಿರಂತರವಾಗಿ 73 ದಿನಗಳ ಕಾಲ ಅಭಿವೃದ್ಧಿ ಕುರಿತ ಸರಣಿ ಬಂದಿದ್ದು ಬಹುಶಃ ಇದೇ ಮೊದಲು ಎನ್ನಬಹುದು. ಯಾವುದೇ ಪ್ರಶಸ್ತಿಯ ಹಿಂದೆ ಬೀಳದೆ ತನ್ನ ಪಾಡಿಗೆ ತಾನು ವೃತ್ತಿ ಮಾಡುತ್ತಾ ಜನಪರ, ಜನಮುಖಿ ಕೆಲಸ ಮಾಡಿಕೊಂಡು ಬಂದಿದ್ದರಿಂದ ತಡವಾಗಿಯಾದರೂ ರಾಜ್ಯ ಸರ್ಕಾರ ಈಗ ಗುರುತಿಸಿ ಇವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ನೀಡಿರುವುದು ನಿಜಕ್ಕೂ ಅರ್ಹವಾಗಿದೆ.

ಆಯ್ಕೆ ಸಮಿತಿ ಸದಸ್ಯರು:
ಚಿತ್ರದುರ್ಗ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳ ಆಯ್ಕೆ ಸಮಿತಿ ಸದಸ್ಯರಾಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕೊಡಲ್ಪಡುವ ಡಿ.ದೇವರಾಜ ಅರಸು ಜಿಲ್ಲಾ ಮಟ್ಟದ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯನಾಗಿ ಕೂಡ ಹೆಂಜಾರಪ್ಪ ಇವರು ಕೆಲಸ ಮಾಡಿದ್ದಾರೆ.

 ಬಯಲು ಸೀಮೆಯ ಚಿತ್ರದುರ್ಗ, ತುಮಕೂರು, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ಕುರಿತಾದ ಸಮಗ್ರ ಮಾಹಿತಿಯುಳ್ಳ ಬಯಲು-ಭದ್ರಾಪುಸ್ತಕ ಮುದ್ರಣದಲ್ಲಿದೆ.

ಬಯಲು ಸೀಮೆಯ ರೈತಾಪಿ ವರ್ಗದ ಕೃಷಿ ಯಶೋಗಾಥೆ, ಪಶುಪಾಲನೆ, ನೀರಾವರಿ ಪದ್ಧತಿ, ಸಮಗ್ರ ಬೆಳೆ ವಿಧಾನ, ಪ್ರಗತಿಪರ ಕೃಷಿ ಕುರಿತಾದ ಬಯಲು ಸೀಮೆ ರೈತರ ಯಶೋಗಾಥೆಕುರಿತ ಪುಸ್ತಕ ಮುದ್ರಣಕ್ಕೆ ಸಿದ್ಧವಾಗುತ್ತಿದೆ.

ಕುಂಚಿಟಿಗ ಜಾತಿಯ ಬುಡಕಟ್ಟು ಹಿನ್ನೆಲೆ, ಕಟ್ಟೆಮನೆ, ಬಂಡಿಕಾರ, ಕೋಲ್ಕಾರ, ಪೂಜಾರಿಕೆ, ಬದುಕು ಬವಣೆ, ಆಚಾರ ವಿಚಾರಕುರಿತಾದ ಸಮಗ್ರ ಮಾಹಿತಿಯುಳ್ಳ ಸಂಶೋಧನಾತ್ಮಕ ಕೃತಿ ಕುಂಚಿಟಿಗ ಬುಡಕಟ್ಟು-ಕಟ್ಟೆಮನೆಕುರಿತಾದ ಕ್ಷೇತ್ರ ಮಾಹಿತಿ ಆಧರಿಸಿದ ಪುಸ್ತಕ ಮುದ್ರಣಕ್ಕೆ ಸಿದ್ಧವಾಗಿದ್ದು ಶೀಘ್ರದಲ್ಲೇ ಈ ಮೂರು ಪುಸ್ತಕಗಳು ಪ್ರಕಟವಾಗಲಿವೆ.

 

- Advertisement -  - Advertisement - 
Share This Article
error: Content is protected !!
";