ಜೈವಿಕ ಇಂಧನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಲು ಗಂಟಿಗಾನಹಳ್ಳಿ ಬಾಬು ಮನವಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕರ್ನಾಟಕ ತೆಂಗು ನಾರಿನ ಸಹಕಾರ ಮಂಡಳಿ ಅಧ್ಯಕ್ಷ ಗಂಟಿಗಾನಹಳ್ಳಿ ವೆಂಕಟೇಶ್ ಬಾಬು ರವರು ಹಾಡೋನಹಳ್ಳಿ ಜೈವಿಕ ಇಂಧನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡುವಸಂಬಂಧ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಎಸ್. ಈ. ಸುಧೀಂಧ್ರ ರವರನ್ನು ಬೇಟಿ ಮಾಡಿ ಮಾತುಕತೆ ನಡೆಸಿ ಮನವಿ ಸಲ್ಲಿಸಿದರು.

     ಹಾಡೋನಹಳ್ಳಿ ಜೈವಿಕ ಇಂಧನ ಘಟಕದ ಅಧ್ಯಕ್ಷ ಗಂಟಿಗಾನಹಳ್ಳಿ ವೆಂಕಟೇಶ್ ಬಾಬು ಹಾಗೂ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನು ಭೇಟಿ ಮಾಡಿರುವುದು ಹಾಡೋನಹಳ್ಳಿ ಜೈವಿಕ ಇಂಧನ ಘಟಕದ ಚಾಲನೆಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ. ಈ ಕುರಿತಾಗಿ ಸುಧೀಂದ್ರ ರವರು ಮಾತನಾಡಿ ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಲು ನಮ್ಮ ರಾಜ್ಯ ಮಂಡಳಿಯು ಮಂಚೂಣಿಯಲ್ಲಿರುತ್ತದೆ. ಅದಕ್ಕೆ ಪೂರಕವಾದ ಕಾರ್ಯಗಳಿಗೆ ಸ್ಪಂದಿಸಲು ನಾವು ಸದಾ ಸಿದ್ದ. ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜೈವಿಕ ಇಂಧನ ಸಂಶೋಧನೆ ಮತ್ತು ಮಾಹಿತಿ ಪ್ರತ್ಯಕ್ಷತಾ ಕೇಂದ್ರ ಹಾಗೂ ಜೈವಿಕ ಇಂಧನ ಸಂಘಗಳ ಪರಸ್ಪರ ಸಹಕಾರಗಳಿಂದಾಗಿ ಜೈವಿಕ ಇಂಧನ ಉತ್ಪಾದನಾ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸಬೇಕೆಂದು ಸಲಹೆ ನೀಡಿದರು.

       ಗ್ರಾಮೀಣ ಜೈವಿಕ ಇಂಧನ ಸಂಘ ಉತ್ಪಾದನಾ ಘಟಕದ ಪುನರ್ ಚಾಲನೆ ಹಾಗೂ ನಿರ್ವಹಣೆಗಾಗಿ ಮಾಡಿರುವ ಮನವಿಗೆ ಸ್ಪಂದಿಸಿ ಡಾ. ದಯಾನಂದ್ ರವರನ್ನು ಯೋಜನಾ ಸಂಯೋಜಕರನ್ನಾಗಿ ನೇಮಿಸಿ ಆದೇಶ ಪತ್ರ ನೀಡಿ ಕೂಡಲೇ ಕಾರ್ಯ ಪ್ರವೃತ್ತರಾಗುವಂತೆ ಸುಧೀಂಧ್ರ ರವರು ಸೂಚಿಸಿದರು. ಹಾಡೋನಹಳ್ಳಿ ಜೈವಿಕ ಇಂಧನ ಉತ್ಪಾದನಾ ಘಟಕದ ಮನವಿಗೆ ತ್ವರಿತವಾಗಿ ಸ್ಪಂದಿಸಿದ ಸುಧೀಂಧ್ರ ರವರ ಕಾರ್ಯಕ್ಕೆ ಜೈವಿಕ ಇಂಧನ ಉತ್ಪಾದನಾ ಘಟಕದ ಅಧ್ಯಕ್ಷರಾದ ಗಂಟಿಗಾನಹಳ್ಳಿ ವೆಂಕಟೇಶ್ ಬಾಬು ರವರು ರಾಜ್ಯ ಅಧ್ಯಕ್ಷರಿಗೆ ಧನ್ಯವಾದಗಳನ್ನು ತಿಳಿಸಿದರು.

        ಈ ಸಂದರ್ಭದಲ್ಲಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಎಲ್. ಶಿವಶಂಕರ್, ಉಪ ಅರಣ್ಯ ಸಂರಕ್ಷಣಧಿಕಾರಿ ಬಿ. ಆರ್. ಲೋಹಿತ್, ಡಾ. ದಯಾನಂದ, ಕಾನೂನು ಸಲಹೆಗಾರ ಸಂತೋಷ್, ಕೆ. ವಿ. ಕೆ. ಯ ಹನುಮಂತರಾಯ ಉಪಸ್ಥಿತರಿದ್ದರು.

 

 

- Advertisement -  - Advertisement - 
Share This Article
error: Content is protected !!
";