ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ವಿ. ಗೋಪಾಲಪ್ಪ (ಗಾರೆ ಮೇಸ್ತ್ರಿ) ಮತ್ತು ಮುನಿರತ್ನಮ್ಮ ದಂಪತಿಯ ಪುತ್ರಿ ಮೋಹನ್ ಕುಮಾರ್ ಆರ್. ರವರ ಪತ್ನಿ ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಮೀನಾಕ್ಷಿ ಜಿ. ರವರಿಗೆ ಪಿಹೆಚ್.ಡಿ ಪದವಿ ಲಭಿಸಿದೆ.
ಶಿಕ್ಷಣ ವಿಭಾಗದ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕಿ ಡಾ. ವಾಣಿಶ್ರೀ ಕೊಪ್ಪದ ರವರ ಮಾರ್ಗದರ್ಶನದಲ್ಲಿ ಮಂಡಿಸಿದ “ಎಫೆಕ್ಟಿವ್ನೆಸ್ ಆಫ್ ಮಲ್ಟಿಮೀಡಿಯಾ ಇನ್‌ಸ್ಟ್ರಕ್ಷನಲ್ ಲರ್ನಿಂಗ್ ಪ್ಯಾಕೇಜ್ ಇನ್ ಎನ್ಹಾನ್ಸಿಂಗ್ ಸೆಕೆಂಡರಿ ಲೆವೆಲ್ ಸ್ಟೂಡೆಂಟ್ಸ್ ಆಟಿಟ್ಯೂಡ್ ಅಂಡ್ ಅಚೀವ್ಮೆಂಟ್ ಇನ್ ಬಯಾಲಜಿ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ಸಂದರ್ಭದಲ್ಲಿ ಮೀನಾಕ್ಷಿ ಜಿ. ಅವರ ಶೈಕ್ಷಣಿಕ ಸಾಧನೆಗಾಗಿ ಕುಟುಂಬಸ್ಥರು, ಗುರು-ಹಿರಿಯರು, ಸ್ನೇಹಿತರು ಮತ್ತು ವಿಜಯಪುರ ಪಟ್ಟಣದ, ಸುತ್ತಮುತ್ತಲಿನವರು ಸೇರಿ ಶುಭ ಕೋರಿ ಅಭಿನಂದನೆ ಸಲ್ಲಿಸಿದ್ದಾರೆ.

