ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಚಳ್ಳಕೆರೆ ತಾಲೂಕಿನ ಮೀರಾಸಾಬಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.
ಮೀರಾಸಾಬಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಮತ್ತು ಪರಶುರಾಂಪುರ ಸಮುದಾಯ ಆರೋಗ್ಯ ಕೇಂದ್ರ ಐಸಿಟಿಸಿ ವಿಭಾಗ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಬಿರಕ್ಕೆ ಜಿಲ್ಲಾ ರಕ್ತ ನಿಧಿ ಕೇಂದ್ರ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಆಗಮಿಸಿ 33 ಯೂನಿಟ್ ಸ್ವಯಂ ಪ್ರೇರಿತವಾಗಿ ರಕ್ತ ದಾನಿಗಳಿಂದ ರಕ್ತವನ್ನು ಸ್ವೀಕರಿಸಿದರು.
ಡಾ.ಹೆಚ್.ಸಿ.ಗುರುಪ್ರಸಾದ್, ಪಿಡಿಒ ವಿಜಯ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವರಾಜ್ ಕುಮಾರ್ ಗೌಡ, ಆರೋಗ್ಯ ನಿರೀಕ್ಷಣಾಧಿಕಾರಿ ನವೀನ್ ಕುಮಾರ್, ಶಿಕ್ಷಕ ಗುರುಮೂರ್ತಿ, ಅರಿವು ಕೇಂದ್ರದ ಮೇಲ್ವಿಚಾರಕ ಗಾದ್ರಿಪಾಲಯ್ಯ, ಯುವಕರಾದ ಶ್ರೀನಿವಾಸ್, ಓಬಳೇಶ್, ದಿನೇಶ್, ಬೋರಯ್ಯ, ಶಿವಕುಮಾರ್, ಮೋಹನ್, ಸಿದ್ದೇಶ್, ಮಹೇಶ್, ಉದಯ್, ಸಿದ್ದೇಶ್, ಅಶೋಕ್ ಸೇರಿದಂತೆ ಮುಂತಾದವರು ರಕ್ತದಾನ ನೀಡಿದರು.
ಶಿಬಿರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೀತಾ ನಾಗರಾಜ್, ಸದಸ್ಯರಾದ ಡಿ.ರಾಜಣ್ಣ ಹಾಗೂ ಸಿದ್ದಲಿಂಗಪ್ಪ ಮತ್ತು ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದವರು ಹಾಗೂ ಊರಿನ ಗ್ರಾಮಸ್ಥರು ಇದ್ದರು.

