ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ನೆಹರು ಮೈದಾನದ ರೋಟರಿ ಭವನದಲ್ಲಿ ಸಿ ವಿ ಜಿ ಪಬ್ಲಿಕೇಶನ್ ಬೆಂಗಳೂರು ಹಾಗೂ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಚಿತ್ರದುರ್ಗ ಇವರ ಸಹಯೋಗದಲ್ಲಿ ತೇಜಸ್ ಇಂಡಿಯಾ ಪ್ರಕಟಿಸಿರುವ ಎಚ್.ಎಸ್. ಶಫಿವುಲ್ಲಾ ರವರ “ಕಣ್ಮರೆ” ಕೃತಿಯನ್ನು ಖ್ಯಾತ ಜಾನಪದ ವಿದ್ವಾಂಸ ಡಾ. ಮೀರಾ ಸಾಬೀಹಳ್ಳಿ ಶಿವಣ್ಣ ಲೋಕಾರ್ಪಣೆ ಮಾಡಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಯುವಕರು ಹೆಚ್ಚು ಹೆಚ್ಚು ಪುಸ್ತಕಗಳನ್ನು ಬರೆಯುವ ಕೌಶಲ್ಯ ಆಸಕ್ತಿಯನ್ನು ಬೆಳಸಿಕೊಂಡು ಈ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ವಕೀಲ ಹಾಗೂ ಗೌರಾಧ್ಯಕ ಬಿ.ಕೆ ರೆಹಮತ್ ಉಲ್ಲಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ರವಿ ಕಾಣದ್ದನ್ನು ಕವಿ ಕಂಡ” ಎಂಬಂತೆ ಎಲ್ಲಿ ಪ್ರೀತಿ, ವಿಶ್ವಾಸ ಗೌರವ ಬಾಂಧವ್ಯ ಬೆಸೆಯುವ ಸಮಾನ ಶುದ್ಧ ಮನಸ್ಸು ಇರುತ್ತದೋ ಅಲ್ಲಿ ನಾವು ಏನಾದರೂ ಸಾಧಿಸಬಹುದು ಅಲ್ಲದೆ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಬಹುದು ಎಂದು ತಿಳಿಸಿದರು.
ಕಣ್ಮರೆ ಕೃತಿ ಕುರಿತು ಕಲಾವಿದ ಹಾಗೂ ವಿಮರ್ಶಕ ಜಬಿವುಲ್ಲಾ ಎಂ.ಅಸದ್ ವಿಮರ್ಶಿಸಿದರು.
ದಯಾ ಪುತ್ತೊರ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕವಿ, ಸಾಹಿತಿಗಳು ಬರೆಯುವ ಪುಸ್ತಕಗಳಿಗೆ ಸರಿಯಾದ ಮನ್ನಣೆ ದೊರೆಯುತ್ತಿಲ್ಲ ಹಾಗಾಗಿ ಇದರ ಬಗ್ಗೆ ರಾಜ್ಯ ಸರ್ಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಗಮನ ಹರಿಸುವುದು ಬಹು ಮುಖ್ಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಲೇಖಕ ಪ್ರೊ.ಎಂ.ಜಿ ರಂಗಸ್ವಾಮಿ, ಉಷಾ ರಾಣಿ, ಅಧ್ಯಕ್ಷ ಎಚ್.ಎಸ್. ಶಫಿವುಲ್ಲಾ, ಶೋಭಾ ಮಲ್ಲಿಕಾರ್ಜುನ್, ಶಬ್ರಿನಾ ಮಹಮದ್ ಅಲಿ, ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವಮೂರ್ತಿ.ಟಿ ಕೋಡಿಹಳ್ಳಿ, ಶಾರದಾ ಜೈರಾಮ್, ಸುಮಾ ರಾಜಶೇಖರ್, ಶಿವಕುಮಾರ್, ವಿನಾಯಕ್, ಶಿವಾನಂದ್, ಮುದ್ದುರಾಜ್, ತಿಪ್ಪಮ್ಮ ನಾಗರಾಜ್, ಬೆಳಕು ಪ್ರಿಯ, ಕನಕ ಪ್ರೀತೇಶ್, ದುರ್ಗಪ್ಪ ದಾಸಣ್ಣನವರ್, ಶಬ್ರಿನಾ ಮಹಮದ್ ಅಲಿ, ಡಾ.ಡಿ.ಧರಣೇಂದ್ರಯ್ಯ, ಪತ್ರಕರ್ತ ಆಲೂರು ಹನುಮಂತರಾಯಪ್ಪ , ಪ್ರಕಾಶ್, ಕಿರಣ್ ಮಿರಜ್ಜಕರ್, ಮುಂತಾದವರು ಇದ್ದರು.