ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಪಿ ಶೇಖರ್ ರವರ ಆದೇಶದ ಮೇರೆಗೆ ಚಿತ್ರದುರ್ಗ ಜಿಲ್ಲಾ ಘಟಕ ಅಧ್ಯಕ್ಷ ಬಿ.ಎಸ್ ಮಂಜಣ್ಣ ನೇತೃತ್ವದಲ್ಲಿ ಸದ್ಯಸ್ಯತ್ವ ನೊಂದಣಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಗೇಟ್ ನಲ್ಲಿ ನಡೆದ ಅಲೆಮಾರಿ ಸುಡುಗಾಡು ಸಿದ್ಧ ಸಮುದಾಯದ 30 ಹೆಚ್ಚಿನ ಮಹಿಳೆಯರು, ಪುರುಷರು ಕನ್ನಡ ನಾಡು ನುಡಿ ನೆಲ ಜಲ ಭಾಷೆ ಗಡಿ ಉಳಿವಿಗಾಗಿ ಹೋರಾಟ ಮಾಡಲು ಮತ್ತು ತಮ್ಮ ಮೂಲ ಭೂತ ಸೌಕರ್ಯಕ್ಕಾಗಿ ಹೋರಾಟ ಮಾಡಲು ಸಂಘಟನೆ ದ್ದೇಯ ದೇಶಗಳನ್ನು ಒಪ್ಪಿ ಸ್ವಯಂ ಪ್ರೇರಣೆಯಿಂದ 30ಕ್ಕೂ ಹೆಚ್ಚು ಮಹಿಳೆಯರು ಮತ್ತು ಪುರುಷರು ಜಿಲ್ಲಾ ಘಟಕದ ಸಂಘಟನೆ ಸದಸ್ಯತ್ವವನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ಜಿ.ಸುರೆಶ್, ತಿಪ್ಪೇಸ್ವಾಮಿ, ಗುರಪ್ಪ, ಚೌಡಪ್ಪ, ಮಂಜುನಾಥ, ಮೈಲಾರಿ, ಮಾರೆಪ್ಪ, ದುರುಗಪ್ಪ ಇತರರು ಇದ್ದರು.