ಚಂದ್ರವಳ್ಳಿ ನ್ಯೂಸ್, ತುಮಕೂರು:
ಮನುಷ್ಯ ಎಂಬುವನು ಹೀಗಿದ್ದ ಎಂಬ ನೆನಪು…
ವಿನಾಶದ ಅಂಚಿಗೆ ಮನುಷ್ಯ ತನ್ನ ತಾನು ತಂದುಕೊಳ್ಳುತ್ತಿದ್ದಾನೆ. ಮನುಷ್ಯನಿಗೆ ಜೀವನ ಮಾಡಲು ಪ್ರಕೃತಿಯಲ್ಲಿ ಎಲ್ಲವೂ ಬೇಕು, ವನ್ಯ ಸಂಪತ್ತು ಮತ್ತು ಗಿಡ ಮರಗಳನ್ನು ರಕ್ಷಣೆ ಮಾಡಿಕೊಂಡಾಗ ಮಾತ್ರ ಬದುಕಲು ಸಾಧ್ಯ.
ಗಿಡ ಮರಗಳನ್ನು ನಾಶ ಮಾಡುತ್ತಾ ಕಾಡು ಪ್ರಾಣಿಗಳನ್ನು ದಿನೇ ದಿನೇ ನಶಿಸುವಂತೆ ಮಾಡುತ್ತಿದ್ದರೆ ಮುಂದೊಂದು ದಿನ ಮನುಷ್ಯನು ನಶಿಸುವಂತ ಕ್ಷಣಗಳು ಬಂದೆ ಬರಬಹುದು.
ಮನುಷ್ಯ ಹೇಗೆ ಸಂಘ ಜೀವಿಯೊ ಹಾಗೆ ಪ್ರಾಣಿ ಪಕ್ಷಿಗಳಿಗೂ ಗಿಡಗಳಿಗೊ ಮನುಷ್ಯನ ಅಗತ್ಯತೆಗಳಿವೆ. ಹೀಗಿರುವಾಗ ಮನುಷ್ಯ ವನ್ಯ ಸಂಪತ್ತನ್ನು ಹಂತ ಹಂತವಾಗಿ ನಾಶ ಮಾಡುತ್ತಾ ಬರುತ್ತಿದ್ದರೆ ಮುಂದೊಂದು ದಿನ ಮನುಷ್ಯನಿಗೂ ಇದೇ ಗತಿ ಬರಬಹುದಲ್ಲವೇ ಆಗ ಯಾರನ್ನು ಬೇಡಲು ಸಾಧ್ಯ ಅಂತಹ ಪರಿಸ್ಥಿತಿ ಬರುವ ಮುನ್ನ ವನ್ಯ ಸಂಪತ್ತನ್ನು ರಕ್ಷಣೆ ಮಾಡಿ,
ಮನುಷ್ಯನ ರಕ್ಷಣೆಗೆ ಬಹು ಮುಖ್ಯವಾಗಿ ಇರುವುದೆಂದರೆ ಅದು ವನ್ಯ ಸಂಪತ್ತು ಭೂಮಿತಾಯಿ ಎಲ್ಲವನ್ನು ಎಲ್ಲಾ ಜೀವಿಗಳಿಗೂ ವ್ಯವಸ್ಥಿತವಾಗಿ ಭೂಮಿಯಲ್ಲಿ ದೊರಕಿಸುತ್ತಾ ಬರುತ್ತಿದೆ ಅಂತಹ ಭೂಮಿ ತಾಯಿಯನ್ನು ನಾವು ಗೌರವಿಸಬೇಕು.
ಭೂಮಿಯಲ್ಲಿ ದೊರೆಯುವ ಎಲ್ಲಾ ಸಂಪತ್ತನ್ನು ರಕ್ಷಿಸಿಕೊಳ್ಳುವ ಕಡೆ ಗಮನ ಕೊಡಬೇಕು ನಾವಿರುವ ಸ್ಥಳದಲ್ಲಿ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಗಿಡಗಳನ್ನು ನೆಡುವ ಕಡೆ ಗಮನಕೊಡಬೇಕು ಮತ್ತು ಆ ಗಿಡಗಳನ್ನು ಪೋಷಿಸಿ ರಕ್ಷಣೆ ಮಾಡಿಕೊಳ್ಳಬೇಕು. ಪ್ರಾಣಿ ಪಕ್ಷಿಗಳಿಗೆ ಆವಾಸಸ್ಥಾನವಾದ ಪರಿಸರವನ್ನು ಮತ್ತು ಕಾಡನ್ನು ಉಳಿಸಿಕೊಳ್ಳುವ ಕಡೆ ಹೆಚ್ಚಿನ ಗಮನ ಕೊಡಬೇಕು.
ನಮಗೆ ಸ್ವಚ್ಛಂದವಾದ ಉಸಿರಾಡಲು ಗಾಳಿ ಕೊಡುವ ಗಿಡಮರಗಳು ಸುರಕ್ಷಿತವಾಗಿದ್ದಾಗ ಮಾತ್ರ ನಾವು ಸ್ವಚ್ಛಂದವಾದ ಗಾಳಿ ಸೇವಿಸಲು ಸಾಧ್ಯ.
ಇದಿಲ್ಲದೆ ಯಾವುದೇ ಜೀವಿ ಆರೋಗ್ಯವಾಗಿತವಾಗಿ ಜೀವನ ಮಾಡಲು ಸಾಧ್ಯವಿಲ್ಲ ಅನೇಕ ಆರೋಗ್ಯ ಸಮಸ್ಯೆಗಳನ್ನು ತಂದುಕೊಳ್ಳುತ್ತಾರೆ.
ಇದಾಗದೇ ಇರಲಿ ಎಂದಾದರೆ ಪರಿಸರದ ಕಡೆ ಅದರ ಸ್ವಚ್ಛತೆಯ ಕಡೆ ಗಮನ ಕೊಡುವುದು ಅತಿ ಮುಖ್ಯ. ಉದಾಹರಣೆಗೆ ನಾವುಗಳೆಲ್ಲ ನಮ್ಮ ಮಕ್ಕಳನ್ನು ಉತ್ತಮ ರೀತಿಯಲ್ಲಿ ಆರೋಗ್ಯವಾಗಿ ಕಾಪಾಡಿಕೊಳ್ಳುವುದು ಅವರ ಮನಸ್ಥಿತಿಗಳು ಉತ್ತಮವಾಗಿರಲು ಮನೆಯ ವಾತಾವರಣವನ್ನು ಸ್ವಚ್ಛವಾಗಿ ಅಂದವಾಗಿ ಇಟ್ಟುಕೊಂಡಿರುತ್ತೇವೆ ಹಾಗೆ ನಾವು ಬೆಳಗ್ಗೆದ್ದು ಓಡಾಡುವ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕೂಡ ಸ್ವಚ್ಛವಾಗಿ ಇಟ್ಟುಕೊಳ್ಳುವಲ್ಲಿ ಗಮನಕೊಡಬೇಕು.
ಇದರ ಜೊತೆ ಕಾಡು ಮತ್ತು ಕಾಡು ಪ್ರಾಣಿ ಪಕ್ಷಿಗಳು ನೀರಿನಲ್ಲಿರುವ ಜಲಚರಗಳು ಇವುಗಳ ಬಗ್ಗೆಯೂ ಕೂಡ ಗಮನ ಕೊಡಬೇಕು ಅಂದರೆ ಅವುಗಳನ್ನು ಉಳಿಸಿ ಕಾಪಾಡಿಕೊಂಡು ಮುಂದಿನ ಜನಕ್ಕೂ ಉಳಿಯಲಿ ಎಂಬ ಮನೋಭಾವನೆ ಮತ್ತು ಪ್ರಜ್ಞೆ ಇಂದಿನ ಜನರಿಗೆ ಇದ್ದರೆ ಸಾಕು .
ಎಲ್ಲರೂ ಆರೋಗ್ಯವಾಗಿ ಸಮೃದ್ಧಿಯಾಗಿ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಲು ಸಹಾಯವಾಗುತ್ತದೆ ಕಾಡು ಕಾಡು ಪ್ರಾಣಿಗಳು ಪಕ್ಷಿಗಳು ಉಳಿದರೆ ಮನುಷ್ಯ ಅದಷ್ಟು ಆರೋಗ್ಯದಿಂದ ಇದ್ದೇ ಇರುತ್ತಾನೆ. ಅವಿಲ್ಲದೆ ಮನುಷ್ಯ ಜೀವನ ಮಾಡಲು ಅಸಾಧ್ಯ ಕಾಡಿನೊಳಗೆ ಸ್ವಚ್ಛಂದವಾಗಿ ಜೀವನ ಮಾಡಲು ಕಾಡು ಪ್ರಾಣಿಗಳು ಸಿದ್ಧವಿರುತ್ತವೆ. ಆದರೆ ನಾಡಿನೊಳಗಿರುವ ಮನುಷ್ಯ ಕಾಡಿನೊಳಗೆ ಹೋಗದೆ ಇರಲು ಸಾಧ್ಯವಿಲ್ಲ . ಅಂತಹ ಕಾಡನ್ನು ನೋಡಿ ಮನಸ್ಸನ್ನು ಉಲ್ಲಾಸಗೊಳಿಸಿಕೊಳ್ಳಬೇಕಾದರೆ ಕಾಡನ್ನು ಉಳಿಸಿ ಬೆಳೆಸುವ ಕಡೆ ತುಂಬಾ ಹೆಚ್ಚಿನ ಗಮನ ಕೊಡುವುದು ಅತ್ಯಗತ್ಯ.
ನಾವು ಗಿಡಗಳನ್ನು ನೆಡುತ್ತೇವೆ ಎಂದು ಒಂದು ದಿನ ಗಿಡ ನೆಟ್ಟು ಇನ್ನೆಂದಿಗೂ ಅದನ್ನು ತಿರುಗಿ ನೋಡದೆ ಇರುವ ಜನರಿದ್ದಾರೆ, ಗಿಡ ನೆಟ್ಟ ಮೇಲೆ ಪೋಷಣೆ ಮಾಡಿ ರಕ್ಷಣೆ ಮಾಡಿಕೊಳ್ಳುವಲ್ಲಿ ಸ್ವಲ್ಪ ಗಮನ ಕೊಟ್ಟರೆ ಸಾಕು…
ನಾವುಗಳು ಕೂಡ ದೂರದಲ್ಲಿರುವ ಕಾಡನ್ನು ಸ್ವಲ್ಪ ಮಟ್ಟಿಗಾದರೂ ಉಳಿಸಿದ ತೃಪ್ತಿ ಮನಸ್ಸಿನಲ್ಲಿ ಇರುತ್ತದೆ. ಇಂದು ಅನೇಕ ಕಾಡು ಪ್ರಾಣಿಗಳು ಸಾವನ್ನು ಅಪ್ಪುತ್ತಿವೆ ಕಾರಣ ಎಲ್ಲರಿಗೂ ತಿಳಿದಿರುವುದೆ ಆಗಿದೆ. ಹೀಗೇಕೆ ಆಗಬೇಕು.
ಕಾಡು ಪ್ರಾಣಿಗಳನ್ನು ಕ್ರೂರ ಪ್ರಾಣಿಗಳೆಂದು ಕರೆಯುತ್ತಾನೆ ಮನುಷ್ಯ. ಇಲ್ಲಿ ಯಾರು ಕ್ರೂರ…? ಯಾವ ಕೆಲಸ ಕ್ರೂರವಾದ ಕೆಲಸ? ಕಾಡನ್ನು ತನ್ನ ಪಾಡಿಗೆ ತನಿರಲು ಬಿಟ್ಟರೆ ಅಲ್ಲಿರುವ ಜೀವಸಂಕುಲ ನಾಡಿನ ಕಡೆ ಹೆಜ್ಜೆ ಹಾಕುವುದಿಲ್ಲ ನಾಡಿನ ಕಡೆ ಹೆಜ್ಜೆ ಹಾಕಲು ಇಷ್ಟ ಇರುವುದಿಲ್ಲ ಅವುಗಳಿಗೆ ಆದರೆ ನಾಡಿನಲ್ಲಿರುವ ಮನುಷ್ಯ…
ಕಾಡಿನ ಕಡೆ ಹೆಜ್ಜೆ ಹಾಕುತ್ತಲೇ ಇರುತ್ತಾನೆ ಕ್ರೂರ ಕೃತ್ಯಗಳನ್ನು ಮಾಡುತ್ತಲೇ ಇರುತ್ತಾ ಎಂದು ನಿಲ್ಲಿಸುವುದು ಈ ಕ್ರೂರ ಕೆಲಸಗಳನ್ನು ಮನುಷ್ಯ. ಹೀಗೆ ಕ್ರೂರ ಕೃತ್ಯಗಳು ಮಾಡುತ್ತಿದ್ದರೆ ಮುಂದೊಂದು ದಿನ ನಾವು ನೀವು, ಒಟ್ಟಾರೆ ಮನುಷ್ಯ ಎಂಬುವನು ಇದ್ದ ಎಂದ ಎಂಬ ನೆನಪು ಪ್ರಾಣಿಗಳು ನೆನೆಸಿಕೊಳ್ಳುವ ಪರಿಸ್ಥಿತಿ ಬಂದರೂ ಬರಬಹುದು…
ಲೇಖನ:ಸರಿತ.ಹೆಚ್, ಕಾಡುಮಲ್ಲಿಗೆ, ತುಮಕೂರು.