ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕಿನ ಬೀರಾವರ ಹಾಗೂ ಲಕ್ಷ್ಮೀಪುರ, ಚಳ್ಳಕೆರೆ ತಾಲ್ಲೂಕಿನ ಭರಮಸಾಗರ ಹಾಲು ಉತ್ಪಾದಕರ ಸಹಕಾರ ಸಂಘಗಳ ರದ್ದತಿಗೆ ಕ್ರಮ ಜರುಗಿಸಲಾಗುತ್ತಿದೆ.
ಸದರಿ ಸಹಕಾರ ಸಂಘಗಳ ನೊಂದಣಿ ರದ್ದತಿಯಿಂದ ಬಾಧಿತರಾಗುವ ಷೇರುದಾರರರು ಆಯಾ ತಾಲ್ಲೂಕಿನ ಸಮಾಪನಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ನಿರೀಕ್ಷಕರ ಕಛೇರಿಗೆ ಖುದ್ದಾಗಿ ಆಕ್ಷೇಪಣೆ ಸಲ್ಲಿಸಬಹುದು.
ಆಗಸ್ಟ್ 15 ಕೊನೆಯ ದಿನವಾಗಿದೆ. ಈ ಅವಧಿಯಲ್ಲಿ ಆಕ್ಷೇಪಣೆಗಳು ಬಾರದೇ ಇದ್ದಲ್ಲಿ ಸಂಘದ ನೊಂದಣಿ ರದ್ದತಿಗೆ ಯಾವುದೇ ತಕರಾರು ಇರುವುದಿದ್ದಲ್ಲವೆಂದು ಭಾವಿಸಿ ಮುಂದಿನ ಶಿಸ್ತು-ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

