ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹಾಡೋನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ 2026-31 ನೇ ಅವಧಿಗೆ ಅದ್ಯಕ್ಷರು ಉಪಾಧ್ಯಕ್ಷರ ಸ್ಥಾನಕ್ಕೆ ನೆಡದ ಚುನಾವಣೆಯಲ್ಲಿ ಅದ್ಯಕ್ಷರಾಗಿ ಹೆಚ್. ಎ.ನಾಗರಾಜು ಅಪ್ಪಯ್ಯಣ್ಣ. ಉಪಾಧ್ಯಕ್ಷರಾಗಿ ಅಪ್ಪಯ್ಯ ನಾಗಪ್ಪ ಅವಿರೋಧವಾಗಿ ಅಯ್ಕೆ ಯಾಗಿದ್ದಾರೆ.
ಚುನಾವಣಾ ಅಧಿಕಾರಿ ಕೆ.ಎನ್ ನಾಗಮಣಿ ನೇತೃತ್ವದಲ್ಲಿ ಇಂದು ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ಇದರ ಅನ್ವಯ 2026-31 ನೇ ಅವಧಿಯ ಹಾಡೋನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಅದ್ಯಕ್ಷರಾಗಿ ಹೆಚ್.ಎ.ನಾಗರಾಜು ಅಪ್ಪಯ್ಯಣ್ಣ, ಉಪಾಧ್ಯಕ್ಷರಾಗಿ ಅಪ್ಪಯ್ಯ ನಾಗಪ್ಪ ಅವಿರೋಧವಾಗಿ ಆಯ್ಕೆ ಹಾಜರಿದ್ದಾರೆ ಎಂದು ಘೋಷಣೆ ಮಾಡಿ 11 ಜನ ನಿರ್ದೇಶಕರಿಗೆ ಪ್ರಮಾಣ ಪತ್ರ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಅದ್ಯಕ್ಷ ನಾರಾಯಣಪ್ಪ, ಮಾಜಿ ಎಂ ಪಿ ಸಿ ಎಸ್ ಹಾಗೂ ವಿ ಎಸ್ ಎಸ್ ಎನ್ ಅದ್ಯಕ್ಷ ಎಂ.ಮುನೇಗೌಡ, ಮಾಜಿ ಅದ್ಯಕ್ಷರುಗಳಾದ ಎಂ.ಮುನಿರಾಜು,ವೆಂಕಟೇಶ, ಹಾಡೋನಹಳ್ಳಿ ಗ್ರಾಮ ಪಂ.ಮಾಜಿ ಅದ್ಯಕ್ಷ ಚೌಡ್ಡಪ್ಪ,ನಿವೃತ್ತ ಪೋಲಿಸ್ ಅಧಿಕಾರಿ ರಂಗಸ್ವಾಮಿ, ವಿ.ಎಸ್.ಎಸ್.ಎನ್ ನಿರ್ದೇಶಕರಾದ ಪಿಳ್ಳಪ್ಪ,ಮಾಜಿ ನಿರ್ದೇಶಕ ರಾಜು,ರೈಲ್ವೆ ಇಲಾಖೆ ಸುಬ್ರಹ್ಮಣ್ಯ ಮುಖಂಡ ಸುಬ್ಬಣ್ಣ, ಎಂ.ಪಿ.ಸಿ.ಎಸ್ ಕಾರ್ಯನಿರ್ವಾಹಕ ಎ.ಎಂ.ನಾಗರಾಜು ಹಾಜರಿದ್ದರು.

