ಹಾಲು ಉತ್ಪಾದನೆ ಮಾಡಿ ವಲಸೆ ಹೋಗುವುದನ್ನ ನಿಲ್ಲಿಸಿ-ಜಯಮ್ಮ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕು ಕಸಬಾ ಹೋಬಳಿ ದೊಡ್ಡಘಟ್ಟ ಗ್ರಾಮದಲ್ಲಿ ಸೋಮವಾರ 116 ಲೀಟರ್ ಹಾಲು ಹಾಕುವುದರ ಮೂಲಕ  ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಜಯಮ್ಮ ಮಾತನಾಡಿ ನಮ್ಮ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ಮತ್ತು ದಲಿತ ಅಲ್ಪಸಂಖ್ಯಾತ ಜನರು ವಾಸವಾಗಿದ್ದು ಆರ್ಥಿಕವಾಗಿ ಮಹಿಳೆಯರು ಸಬಲೀಕರಣ ಹೊಂದಬೇಕಾಗಿದ್ದಲ್ಲಿ ಎಲ್ಲಾ ಮನೆಗಳಲ್ಲಿಯೂ ಹಸುಗಳನ್ನು ಸಾಕಿ ಹಾಲು ಹಾಕುವುದರ ಮೂಲಕ ಆರ್ಥಿಕವಾಗಿ ಸಬಲೀಕರಣವಾಗಬಹುದು ಎಂದು ಕರೆ ನೀಡಿದರು.

- Advertisement - 

ಉದ್ಯೋಗಕ್ಕಾಗಿ ಯಾವುದೇ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬಹುದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ವಿಸ್ತೀರ್ಣ ಅಧಿಕಾರಿ ಕೃಷ್ಣ ಕುಮಾರ್ ಎಸ್. ಜಿ ಹಾಗೂ ಕಾರ್ಯದರ್ಶಿ ಭೂಮಿಕಾ, ಉಪಾಧ್ಯಕ್ಷೆ ಉಮಾದೇವಿ
ನಿರ್ದೇಶಕರುಗಳಾದ. ಅಂಜಲಿ, ಪ್ರೇಮಕ್ಕ, ಲತಾ, ಸುಮಿತ್ರಮ್ಮ ತಿಮ್ಮಕ್ಕ, ಕಾವ್ಯ, ಭಾಗ್ಯಮ್ಮ, ಅಂಬುಜಾಕ್ಷಿ ಪುಷ್ಪಲತಾ ಮತ್ತು ದೊಡ್ಡಘಟ್ಟದ ಗ್ರಾಮಸ್ಥರು ಹಾಜರಿದ್ದರು.

 

- Advertisement - 

 

 

Share This Article
error: Content is protected !!
";