ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಂದು ಕಡೆ ಹಾಲಿನ ಬೆಲೆ ಲೀಟರ್ ಗೆ 9 ರೂಪಾಯಿ ಹೆಚ್ಚಳ ಮಾಡಿ ಗ್ರಾಹಕರನ್ನು ಲೂಟಿ ಹೊಡೆಯುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮತ್ತೊಂದು ಕಡೆ ಹಾಲು ಉತ್ಪಾದಕರಿಗೆ ಕೊಡುವ ಹಾಲಿನ ಖರೀದಿ ದರವನ್ನ 3.50 ರೂಪಾಯಿ ಇಳಿಸುವ ಮೂಲಕ ರೈತರಿಗೆ ಟೋಪಿ ಹಾಕಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ, ಗ್ರಾಹಕರಿಂದ ವಸೂಲು ಮಾಡುತ್ತಿರುವ ಹೆಚ್ಚಿನ ಬೆಲೆ ಯಾರ ಜೇಬು ಸೇರುತ್ತಿದೆ? ಹಾಲಿನ ದರ ಹೆಚ್ಚಳದಿಂದ ರೈತರಿಗೆ ನಯಾಪೈಸೆ ಲಾಭವಾಗದ ಮೇಲೆ ಹಾಲಿನ ದರ ಏರಿಸಿದ್ದಾದರೂ ಯಾವ ಪುರುಷಾರ್ಥಕ್ಕಾಗಿ?
ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರ ರಕ್ತ ಹೀರುತ್ತಿರುವ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಅಶೋಕ್ ವಾಗ್ದಾಳಿ ಮಾಡಿದ್ದಾರೆ.