ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ತಳಕು ಹೋಬಳಿಯ ಗೌರಸಮುದ್ರ ಶ್ರೀಮಾರಮ್ಮದೇವಿ ಜಾತ್ರೆ ಮರಿಪರಿಷೆ ಅ.೦೧ರ ಮಂಗಳವಾರ ಸಾವಿರಾರು ಭಕ್ತರ ಸಮಕ್ಷಮದಲ್ಲಿ ಯಶಸ್ವಿಯಾಗಿ ನಡೆಯಿತು.
ರಾಜ್ಯದ ವಿವಿಧ ಭಾಗಗಳಿಂದ ದೇವಿಯ ಭಕ್ತರು ಆಗಮಿಸಿ ದರ್ಶನ ಪಡೆದರು. ತುಮುಲು ಪ್ರದೇಶದಲ್ಲೂ ಭಕ್ತರು ತಮ್ಮ ಇಷ್ಟದೇವರಾದ ಮಾರಮ್ಮದೇವಿಯನ್ನು ಪೂಜಿಸಿ ತಮ್ಮ ಹರಿಕೆಗಳನ್ನು ದೇವಿಗೆ ಅರ್ಪಿಸಿದರು.
ದೇವಸ್ಥಾನದ ಆಡಳಿತ ಮಂಡಳಿ, ತಾಲ್ಲೂಕು ಆಡಳಿತ ಹಾಗೂ ಗ್ರಾಮಪಂಚಾಯಿತಿ ವತಿಯಿಂದ ಆಗಮಿಸಿದ ಭಕ್ತರಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಮರಿಪರಿಷೆ ಸಂದರ್ಭದಲ್ಲಿ ಭಕ್ತರು ದೇವಿಗೆ ಅರ್ಪಿಸಿದ ಕಾಣಿಕೆಯನ್ನು ಏಣಿಕೆ ಮಾಡಲಾಯಿತು. ಒಟ್ಟು ೫,೯೭.೫೪೬ ಹಣ ಹುಂಡಿಯಲ್ಲಿ ಸಂಗ್ರಹವಾಗಿತ್ತು.
ತಾಲ್ಲೂಕು ಕಚೇರಿಯ ಮುಜುರಾಯಿ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಏಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು. ತಹಶೀಲ್ಧಾರ್ ರೇಹಾನ್‌ಪಾಷ, ಗ್ರಾಮ ಪಂಚಾಯಿತಿ ಅಧ್ಯಕ್ಷ ಓಬಣ್ಣ, ಕಂದಾಯಾಧಿಕಾರಿ ಲಿಂಗೇಗೌಡ ಮುಂತಾದವರು ಇದ್ದರು.