ಮಿನಿ ವಿಮಾನ ಪತನ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ವಿಜಯಪುರ:
ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಎರಡು ಆಸನಗಳ ಖಾಸಗಿ ಮಿನಿ ವಿಮಾನ ಭಾನುವಾರ ಮಧ್ಯಾಹ್ನ ಪತನವಾಗಿದೆ.

ಕ್ಯಾಪ್ಟನ್ ಕುನಾಲ್ ಮಲ್ಹೋತ್ರಾ ಹಾಗೂ ತರಬೇತಿ ನಿರತ ಪೈಲಟ್ ಗೌತಮ್ ಶಂಕರ್ ಪಿ.ಆರ್ ಎಂಬವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

- Advertisement - 

ರೆಡ್ ಬರ್ಡ ಎವಿಯೇಷನ್ ವಿಮಾನ ತರಬೇತಿ ಸಂಸ್ಥೆಗೆ ಸೇರಿದ ಸೆಸ್ನಾ 172 ಟ್ಯಾಂಗೋ ಚಾರ್ಲಿ ಎಂಬ ಲಘು ವಿಮಾನ ಇದಾಗಿದ್ದು, ಇಂಧನ ಖಾಲಿಯಾಗಿದ್ದರಿಂದ ಪತನಗೊಂಡಿದೆ ಎನ್ನಲಾಗುತ್ತಿದೆ.

ವಿಮಾನ ನೆಲಕ್ಕಪ್ಪಳಿಸುವ ಮೊದಲೇ ಇಬ್ಬರೂ ಹೊರಕ್ಕೆ ಹಾರಿ ಜೀವ ಉಳಿಸಿಕೊಂಡಿದ್ದಾರೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬಬಲೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತರಬೇತಿ ವಿಮಾನ ಕಲಬುರಗಿಯಿಂದ ಬೆಳಗಾವಿಗೆ ಹಾರಾಟ ನಡೆಸುತ್ತಿತ್ತು ಎಂದು ತಿಳಿದು ಬಂದಿದೆ.

- Advertisement - 

 

 

Share This Article
error: Content is protected !!
";