ಕೇಂದ್ರ ಸಚಿವರು, ಸಂಸದರ ವಿರುದ್ಧ ಸಚಿವ ಚಲುವರಾಯಸ್ವಾಮಿ ಕಿಡಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದಿಂದ ಚುನಾಯಿತರಾಗಿ ಕೇಂದ್ರದಲ್ಲಿ ಸಂಸದರಾಗಿ, ಮಂತ್ರಿಯಾಗಿರುವವರಿಗೆ ಕಿಂಚಿತ್ ರಾಜ್ಯದ ಜನರ ಬಗ್ಗೆ ಗೌರವ, ಕಾಳಜಿ ಇದ್ದರೆ ಮಹಾತ್ಮಗಾಂಧಿ ನರೇಗಾ ಯೋಜನೆ ಉಳಿಸಿ ವಿಬಿ ಜಿ ರಾಮ್ ಜಿಯನ್ನು ವಿರೋಧಿಸಬೇಕೆಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕಿಡಿ ಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಶೇ.100ರಷ್ಟು ಕೂಲಿ ನೀಡಲಾಗುತ್ತಿದ್ದ ಮನರೇಗಾ ಯೋಜನೆಯ ಸ್ವರೂಪವನ್ನೇ ಬದಲಿಸಿ, ಅನೇಕ ಲೋಪದೋಷಗಳನ್ನು ಹೊಂದಿರುವ ಜಿ ರಾಮ್‌ಜಿ ತರಲು ಹೊರಟಿದ್ದಾರೆ. ಅದರಲ್ಲೂ ಶೇ.60-40 ಸ್ಕೀಂ ತಂದಿರುವುದು ಶ್ರಮಿಕ ವಿರೋಧಿ ನೀತಿಯಾಗಿದೆ. ಬಿಜೆಪಿ-ಜೆಡಿಎಸ್ ಸಂಸದರಿದ್ದಾರೆ. ಅವರಿಗೆ ನಾಚಿಕೆಯಾಗಬೇಕು.

- Advertisement - 

ಎಂಪಿಗಳು, ಮಂತ್ರಿಗಳು ತಮಿಳುನಾಡು ಸರ್ಕಾರಕ್ಕೆ ಕೊಡುವ ಸಪೋರ್ಟ್ನ್ನೂ ಕರ್ನಾಟಕ ರಾಜ್ಯಕ್ಕೆ ನೀಡುತ್ತಿಲ್ಲ ಎಂದರೆ ಅವರದು ಒಂದೇ ಅಜೆಂಡಾ, ನರೇಗಾ ವಿರೋಧ ಮಾಡಬೇಕಷ್ಟೆ. ಅದಕ್ಕಾಗೇ ಬಿಜೆಪಿಯವರು ಸದನದಲ್ಲಿ ಭಾಗವಹಿಸಿದಂತೆಯೂ ಆಗಬೇಕು, ನರೇಗಾ ಚರ್ಚೆಯಲ್ಲಿ ಭಾಗವಹಿಸಿದಂತೆಯೂ ಆಗಬೇಕು ಎಂಬ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದಾರೆ.

ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ವಿಚಾರದ ಬಗ್ಗೆ ಚರ್ಚಿಸಲಾಗಿದೆ. ಅವರು ಬ್ಯುಸಿನೆಸ್ ಅಡ್ವೆಸರಿ ಕಮಿಟಿ ಸಭೆಯಲ್ಲಿ ಕುಳಿತು ಚರ್ಚಿಸಲಾಗಿದೆ. ಇಷ್ಟಾದರೂ ಮನ್ರೇಗಾ ಬಗ್ಗೆ ಎರಡು ದಿನ ಚರ್ಚಿಸಲು ಸರ್ಕಾರ ತಯಾರಿದೆ ಎಂದು ತಿಳಿಸಿದ್ದೇವೆ. ಆದರೆ ಬಿಜೆಪಿ ಜೆಡಿಎಸ್‌ನವರು ಸದನದಲ್ಲಿ ಅಹೋರಾತ್ರಿ  ಧರಣಿ ನಡೆಸುತ್ತ ರಾಜ್ಯದ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಇದು ದುರದೃಷ್ಟಕರ ಬೆಳವಳಿಗೆ ಎಂದು ಹರಿಹಾಯ್ದರು.

- Advertisement - 

Share This Article
error: Content is protected !!
";