ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಮ್ಮ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ದೇಶದ ಸತ್ಪ್ರಜೆಗಳನ್ನಾಗಿ ತಯಾರು ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು.
ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದು ಹೇಳಿದರು.
ತಾಹಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಿರಿಯೂರು ಶಾಲಾ ವಾರ್ಷಿಕೋತ್ಸವವನ್ನು ತಾಹಾ ಪ್ಯಾಲೇಸ್ ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಸಮಿತಿಯ ಅಧ್ಯಕ್ಷ ಬಿ.ಎಸ್ ನವಾಬ್ ಸಾಬ್‌ಮಾತನಾಡಿ ನಮ್ಮ ಶಾಲೆಯಲ್ಲಿ ಉತ್ತಮ ನುರಿತಶಿಕ್ಷಕರಿದ್ದು, ಉತ್ತಮ ವಿಜ್ಞಾನ ಪ್ರಯೋಗಾಲಯ ಇದೆ ಉತ್ತಮ ಆಟದ ಮೈದಾನವಿದೆ, ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಉತ್ತಮ ಪರಿಸರ ಇದೆ ಎಂದರು.
ಮುಖಂಡರಾದ ಪಿ ಎಸ್ ಸಾದತ್ ಉಲ್ಲಾ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಬೇಕು ಯಾವ ವಿದ್ಯಾರ್ಥಿಯು ಸಹ ಶಿಕ್ಷಣದಿಂದ ವಂಚಿತವಾಗಬಾರದು, ಶಿಕ್ಷಣವೇ ಶಕ್ತಿ ಎಂದರು.
ಕಾರ್ಯಕ್ರಮದಲ್ಲಿ ಪೌರಾಯುಕ್ತ ಎ.ವಾಸಿಂ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಆರೀಫ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಖಾದಿ ರಮೇಶ್, ಕಾಂಗ್ರೆಸ್ ಮುಖಂಡ ಶಿವಕುಮಾರ್, ಜ್ಞಾನೇಶ್,ಗುರುಪ್ರಸಾದ್, ಮಹಮ್ಮದ್ ನಾಜೀಮ್, ಮೊಹಮ್ಮದ್ ನಯಾಜ್, ಜಿ ದಾದಾಪೀರ್, ಈಸಿಓ ಜಾಫರ್ ,ಮಹಮದ್ ನಿಜಾಮ್ ಮುಖ್ಯ ಶಿಕ್ಷಕರಾದ ಉಮೇಶ್, ಸಲಹೆಗಾರ ಶಬ್ಬೀರ್ ಮತ್ತು ಸಿಬ್ಬಂದಿ ಹಾಗೂ ಶಿಕ್ಷಕರು ಪೋಷಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

