ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಬೆಸ್ಕಾಂ ಇಲಾಖೆಗೆ ಸುಮಾರು ೩.ಕೋಟಿ ೫೬ ಲಕ್ಷಗಳ ರೂ ವೆಚ್ಚದಲ್ಲಿ ೮ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ರಾಜ್ಯ ಯೋಜನಾ ಹಾಗೂ ಸಾಂಖ್ಯಿಕ ಸಚಿವರು ಮತ್ತು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಡಿ. ಸುತಾರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪೀರ್ ಸಾಬ್, ಜಿ.ತಿಮ್ಮರಾಯ, ಸಹಾಯಕ ಲೆಕ್ಕಾಧಿಕಾರಿ ವಿ.ತಿಪ್ಪೇಸ್ವಾಮಿ, ಕೆ.ಎಸ್.ಗಿರೀಶ್, ಎಸ್.ಶಿವಪ್ಪ, ಹರೀಶ್, ನೌಕರ ಸಂಘದ ಕಾರ್ಯದರ್ಶಿ ಯೋಗೇಶ್ ಕುಮಾರ್, ಉಪಾಧ್ಯಕ್ಷ ಎನ್.ಮಂಜುನಾಥ್, ಸ್ಥಳೀಯ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.