ನಟಿ ರನ್ಯಾ ರಾವ್‌ಗೊತ್ತೇ ಇಲ್ಲ ಎನ್ನುತ್ತಿದ್ದ ಸಚಿವ ಡಾ.ಪರಮೇಶ್ವರ ನಿಜಬಣ್ಣ ಬಯಲು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗೋಲ್ಡ್‌ಸ್ಮಗ್ಲರ್ ನಟಿ ರನ್ಯಾ ರಾವ್‌ಯಾರು ಎಂದು ಗೊತ್ತೇ ಇಲ್ಲ ಎನ್ನುತ್ತಿದ್ದ ಗೃಹ ಸಚಿವ ಡಾ.ಜಿ ಪರಮೇಶ್ವರ
ಹಾಗೂ ಕರ್ನಾಟಕ ಕಾಂಗ್ರೆಸ್ ನಾಯಕರ ನಿಜಬಣ್ಣ ಈಗ ಒಂದೊಂದೆ ಬಯಲಾಗುತ್ತಿದೆ ಎಂದು ಜೆಡಿಎಸ್ ದೂರಿದೆ.

- Advertisement - 

ಗೃಹ ಸಚಿವರ ಶಿಕ್ಷಣ ಸಂಸ್ಥೆಯಿಂದ ಗೋಲ್ಡ್‌ಸ್ಮಗ್ಲರ್‌ರನ್ಯಾಗೆ 40 ಲಕ್ಷ ರೂ. ಕ್ರೆಡಿಟ್‌ಕಾರ್ಡ್‌ಬಿಲ್‌ಪಾವತಿಸಲಾಗಿದೆ. ಪರಮೇಶ್ವರ್‌ಅವರುರನ್ಯಾ ಮದುವೆ ವೇಳೆ 20 ಲಕ್ಷ ರೂ. ಗಿಫ್ಟ್‌ಕೊಟ್ಟಿದ್ದಾರೆ ಎಂದು ಸ್ವತಃ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಒಪ್ಪಿಕೊಂಡಿದ್ದಾರೆ.

- Advertisement - 

ಕಾಂಗ್ರೆಸ್‌ಸರ್ಕಾರದ ಸಚಿವರು ತಮ್ಮಲ್ಲಿರುವ ಬ್ಲ್ಯಾಕ್‌ಮನಿಯನ್ನು ಆಕೆಯನ್ನು ಬಳಸಿಕೊಂಡು ಗೋಲ್ಡ್‌ಮನಿಯಾಗಿ ಬದಲಾಯಿಸಿದ್ದಾರೆ ಎಂಬ ಅನುಮಾನಗಳು ಹುಟ್ಟಿಕೊಂಡಿದೆ ಎಂದು ಜೆಡಿಎಸ್ ಆರೋಪಿಸಿದೆ.

ಚಿನ್ನಕಳ್ಳಸಾಗಾಣೆ ಪ್ರಕರಣದಲ್ಲಿ ಕೇವಲ ಒಬ್ಬ ಸಚಿವರು ಇದ್ದಾರೆಯೇ ಅಥವಾ ಮತ್ತಷ್ಟು ಮಂತ್ರಿಗಳು ಇದ್ದಾರೆಯೇ ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಿ, ತಮ್ಮ ನೈತಿಕತೆಯನ್ನು ಪ್ರದರ್ಶಿಬೇಕು ಎಂದು ಜೆಡಿಎಸ್ ಪಕ್ಷವು ಆಗ್ರಹಿಸುತ್ತದೆ.

- Advertisement - 

Share This Article
error: Content is protected !!
";