ವಿಐಎಸ್ ಎಲ್ ಪುನ:ಶ್ಚೇತನಕ್ಕೆ 15 ಸಾವಿರ ಕೋಟಿ ಬೇಕು: ಸಚಿವ ಹೆಚ್.ಡಿ. ಕುಮಾರಸ್ವಾಮಿ

WhatsApp
Telegram
Facebook
Twitter
LinkedIn

ಶಿವಮೊಗ್ಗ : ಭದ್ರಾವತಿ ವಿಐಎಸ್‌ಎಲ್ ನಿರ್ವಹಣೆಗೆ ಇನ್ನೂ ಬಹಳ ಕೆಲಸವಿದೆ. ಸುಮಾರು ೧೫ ಸಾವಿರ ಕೋಟಿ ಬೇಕಾಗಬಹುದು. ರೋಗಗ್ರಸ್ಥ ಕಾರ್ಖಾನೆಯ ಪಟ್ಟಿಗೆ ಈಗಾಗಲೇ ಅದು ಸೇರಿದ್ದು, ಪ್ರಧಾನಿ ಮತ್ತು ಆರ್ಥಿಕ ಇಲಾಖೆ ಮನವೊಲಿಸಿ ನಾನು ನೀಡಿದ ಮಾತಿನಂತೆ ಕಾರ್ಮಿಕರ ಹಿತದೃಷ್ಟಿಯಿಂದ ಮತ್ತು ವಿಶ್ವೇಶ್ವರಯ್ಯನವರ ಹೆಸರು ಉಳಿಸಲು ವಿಐಎಸ್ ಎಲ್ ಪುನರುಜ್ಜಿವನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಜಾಕ್ ಸ್ಟೀಲ್ ಪ್ಲಾಂಟ್ ೬೦೦೦ ಎಕರೆಯಲ್ಲಿದೆ. ೧೨ ವರ್ಷ ನಿರಂತರವಾಗಿ ಲಾಭದಲ್ಲಿದ್ದ ಫ್ಯಾಕ್ಟರಿ ಈಗ ಮಾರಾಟಕ್ಕೆ ಇಡಲಾಗಿದೆ. ಪ್ರಧಾನಿ ವಿಷನ್ ಇದೆ. ವಿಕಸಿತ ಮತ್ತು ಆತ್ಮನಿರ್ಭರ ಭಾರತ ಕನಸು ಹೊಂದಿರುವ ಪ್ರಧಾನಿಗೆ ಈ ಕಾರ್ಖಾನೆಯನ್ನು ಲಾಭಕ್ಕೆ ತಂದು ಅದರ ಮೂಲಕ ವಿಐಎಸ್‌ಎಲ್ ಕಾರ್ಖಾನೆಯನ್ನು ಲಾಭಕ್ಕೆ ಕೊಂಡೊಯ್ಯುವ ಗುರಿ ಹಾಕಿಕೊಂಡಿದ್ದೇನೆ. ಇದು ರಾತ್ರೋರಾತ್ರಿ ಆಗುವ ಕೆಲಸವಲ್ಲ ಎಂದು ವಿವರಿಸಿದರು.

Nagendra Chandravalli Reporter   About Us
For Feedback - [email protected]

LATEST Post

error: Content is protected !!
WhatsApp Icon Telegram Icon