ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮರಳು ಮಾಫಿಯಾಗೆ ಸಚಿವ ಈಶ್ವರ್ಖಂಡ್ರೆ ಶ್ರೀ ರಕ್ಷೆ ! ನೀಡುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ಬೀದರ್ಜಿಲ್ಲೆಯ ಔರಾ ತಾಲ್ಲೂಕಿನ ಮಾಂಜ್ರಾ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆಯುವ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ.
ನದಿಯ ಒಡಲನ್ನು ಬಗೆಯುತ್ತಿದ್ದರೂ, ಬೀದರ್ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಅರಣ್ಯ ಮಂತ್ರಿ ಈಶ್ವರ್ ಖಂಡ್ರೆ ಅವರು ಕಂಡು ಕಾಣದಂತೆ ಇದ್ದಾರೆ.
ಮರಳು ಮಾಫಿಯಾವನ್ನು ಮಟ್ಟಹಾಕುವಲ್ಲಿ ಜಿಲ್ಲಾಡಳಿತ ವಿಫಲವಾಗಿರುವುದನ್ನು ಗಮನಿಸಿದರೆ, ಸ್ಯಾಂಡ್ಮಾಫಿಯಾ ಜೊತೆ ಸಚಿವರೇ ಕೈಜೋಡಿಸಿದಂತಿದೆ ಎಂದು ಜೆಡಿಎಸ್ ಟೀಕಿಸಿದೆ.

