ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಹಾಸನದಲ್ಲಿ ನಡೆಯುತ್ತಿರುವ ಜನಕಲ್ಯಾಣ ಸಮಾವೇಶಕ್ಕೆ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಹಿಂಬದಿಯಿಂದ ಬಂದ ಇನೋವಾ ಸಚಿವರ ಕಾರಿಗೆ ಡಿಕ್ಕಿ ಹೊಡೆದಿದೆ.
ರಾಷ್ಟ್ರೀಯ ಹೆದ್ದಾರಿ 75 ಶಾಂತ್ರಿ ಗ್ರಾಮದ ಟೋಲ್ ಬಳಿ ಅಪಘಾತ ಸಂಭವಿಸಿದೆ. ಹಿಂಬದಿಯಿಂದ ಬಂದ ಇನೋವಾ ಸಚಿವರ ಕಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಸಚಿವ ಮುನಿಯಪ್ಪ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಅಪಘಾತದ ಹೊಡೆತಕ್ಕೆ ಸಚಿವರ ಕಾರು ಜಖಂಗೊಂಡಿದೆ. ಸಚಿವ ಮುನಿಯಪ್ಪ ಅವರು ಬದಲಿ ವಾಹನದ ಮೂಲಕ ಸಮಾವೇಶಕ್ಕೆ ತೆರಳಿದರು.

