ಕೆರೆ ಅಭಿವೃದ್ಧಿಗೆ ಚಾಲನೆ ನೀಡಿದ ಸಚಿವ ಕೆ.ಹೆಚ್.ಮುನಿಯಪ್ಪ 

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ: 
ವಿಶ್ವ ಜಲ ದಿನದ ಅಂಗವಾಗಿ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಪಾಲ್ ಪಾಲ್ ದಿನ್ನೆ ಕೆರೆಯ ಅಭಿವೃದ್ಧಿ ಕಾಮಾಗಾರಿಗೆ ಸಚಿವ ಕೆ.ಹೆಚ್.ಮುನಿಯಪ್ಪ ಚಾಲನೆ ನೀಡಿದರು.

ಕೆರೆಯ ಅಂಗಳದಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಜಮೀನು ಮಂಜೂರು ಮಾಡಲು ಸಾಧ್ಯವಾಗದ ಹಿನ್ನಲೆ ನಿವೇಶನ ಕೊಡಿಸುವ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದರು.

ದೊಡ್ಡಬಳ್ಳಾಪುರ ತಾಲೂಕು ಪಾಲ್ ಪಾಲ್ ದಿನ್ನೆ ಕೆರೆ ಹೂಳು ತೆಗೆಯುವ ಕಾಮಾಗಾರಿಗೆ ಚಾಲನೆ ನೀಡಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರವಾಗಲಿ ರಾಜ್ಯ ಸರ್ಕಾರವಾಗಲಿ ಜಲ ಸಂರಕ್ಷಣೆ ಮಾಡಬೇಕು, ಮಳೆನೀರು ಕೊಯ್ಲು ಮಾಡುವ ಮೂಲಕ ಅಂತರ್ಜಲ ಸಂರಕ್ಷಣೆ ಮಾಡ ಬೇಕು, ನದಿ ಮತ್ತು ನಾಲೆಗಳಲ್ಲಿ ನೀರು ಸಂಗ್ರಹಿಸಿ ಬೇಕು, ನೀರಿನ ದುರುಪಯೋಗವಾಗ ಬಾರದೆಂಬ ಕಾರಣಕ್ಕೆ ವಿಶ್ವ ಜಲ ದಿನವನ್ನ ಆಚರಣೆ ಮಾಡಲಾಗುತ್ತಿದೆ ಎಂದರು.

ವ್ಯವಸಾಯ ಹೆಚ್ಚಾಗುತ್ತಿರುವುದರಿಂದ ಕೆರೆ ಮತ್ತು ಕಾಲುವೆಗಳ ಒತ್ತುವರಿಯಾಗುತ್ತಿದೆ. ಜಿಲ್ಲಾಧಿಕಾರಿಗಳು ಇವುಗಳ ರಕ್ಷಣೆ ಮಾಡಬೇಕಿದೆ. ವಿಶ್ವ ಜಲ ದಿನದ ಅಂಗವಾಗಿ ಘಾಟಿ ಸುತ್ತಮುತ್ತಲಿನ ಕೆರೆಗಳ ಸಂರಕ್ಷಣೆ ಮಾಡಲಾಗುತ್ತಿದೆ, ಕೆರೆಯಲ್ಲಿ ತುಂಬಿರುವ ಹೂಳು ತೆಗೆಯುವುದು, ನೀರು ಹರಿದು ಬರುವ ಜಾಗವನ್ನ ಸ್ವಚ್ಛ ಮಾಡುವುದು, ಕಟ್ಟೆಯ ಎತ್ತರವನ್ನ ಹೆಚ್ಚಿಸುವ ಮೂಲಕ ನೀರಿನ ಸಂಗ್ರಹ ಸಾಮಾರ್ಥ್ಯವನ್ನ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಪಾಲ್ ಪಾಲ್ ದಿನ್ನೆ ಕೆರೆಯ ಜಾಗದಲ್ಲಿ ಗ್ರಾಮದ ರೈತರು ಸಾಗುವಳಿಯನ್ನ ಮಾಡುತ್ತಿದ್ದಾರೆ. ಆದರೆ ಈ ಜಮೀನು ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸೇರಿದ್ದು, ಈ ಜಾಗವನ್ನ ಮಂಜೂರು ಮಾಡಲು ಸಾಧ್ಯವಿಲ್ಲ. ಬಡ ರೈತರಿಗೆ ನಿವೇಶನವನ್ನು ಕೆಲಸವನ್ನು ಮಾಡುವ ಕೆಲಸ ಮಾಡುವುದ್ದಾಗಿ ಹೇಳಿದರು.

ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅತಿ ಹೆಚ್ಚು ಆದಾಯ ಬರುವ ಕ್ಷೇತ್ರ,ಪ್ರಸಿದ್ಧವಾದ ಜಾತ್ರೆ ನಡೆಯುವುದರಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡ ಬೇಕಿದೆ, ಮುಜರಾಯಿ ಇಲಾಖೆ ಸಚಿವ ರಾಮಲಿಂಗರೆಡ್ಡಿಯವರು ಅಭಿವೃದ್ಧಿಗೆ ಕೈಜೋಡಿಸಿದ್ದಾರೆ ಎಂದರು.

ಈ ವೇಳೆ ಜಿಲ್ಲಾಧಿಕಾರಿಗಳಾದ ಬಸವರಾಜು, ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ಇಓ ಮುನಿರಾಜು, ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ರಂಗಪ್ಪ, ಆರ್.ವಿ.ಮಹೇಶ್ ಕುಮಾರ್, ಮುಖಂಡರಾದ ರಾಮಕೃಷ್ಣಪ್ಪ ಸೇರಿದಂತೆ ಹಲವು ಮುಖಂಡರು ಮತ್ತು ಅಧಿಕಾರಿಗಳಿದ್ದರು.

 

- Advertisement -  - Advertisement - 
Share This Article
error: Content is protected !!
";