ನಿಗದಿತ ದಿನಾಂಕದಂದೇ ಮರು ಸಮೀಕ್ಷೆ ನಡೆಯಲಿದೆ-ಸಚಿವ ಲಾಡ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಂಪುಟ ಸಭೆಯಲ್ಲಿ ಜಾತಿ ಸಮೀಕ್ಷೆ ಗೊಂದಲಗಳ ಬಗ್ಗೆ ಚರ್ಚೆಯಾಗಿದೆ. ಆದರೆ  ನಿಗದಿತ ದಿನಾಂಕದಂದೇ ಮರು ಸಮೀಕ್ಷೆ ಆರಂಭವಾಗಲಿದೆ ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಸ್ಪಷ್ಟಪಡಿಸಿದ್ದಾರೆ.

ಜಾತಿಪಟ್ಟಿ ಗೊಂದಲ ಸಂಬಂಧ ಕಾವೇರಿ ನಿವಾಸದಲ್ಲಿ ಸಿಎಂ ನೇತೃತ್ವದಲ್ಲಿ ಸಭೆ ನಡೆದು ಚರ್ಚಿಸಲಾಯಿತು. ವಿಧಾನಸೌಧದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ಜರುಗಿತ್ತು. ಆ ಸಭೆಯಲ್ಲಿ ಜಾತಿ ಸಮೀಕ್ಷೆ ಗೊಂದಲ ಬಗ್ಗೆ ಗಂಭೀರ ಚರ್ಚೆ ನಡೆದಿತ್ತು. 331 ಜಾತಿ ಸೇರ್ಪಡೆ ಬಗ್ಗೆ ಹಲವು ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದರು.

- Advertisement - 

ಜಾತಿ ಗೊಂದಲ ನಿವಾರಿಸುವಂತೆ ಅಭಿಪ್ರಾಯ ವ್ಯಕ್ತವಾಗಿತ್ತು. ಜೊತೆಗೆ, ಹಲವರು ಜಾತಿ ಸಮೀಕ್ಷೆ ಮುಂದೂಡಿಕೆಗೆ ಒತ್ತಾಯಿಸಿದ್ದರು. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ನಿನ್ನೆ ರಾತ್ರಿಯೇ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯನವರೊಂದಿಗೆ ಚರ್ಚೆ ನಡೆಸಲಾಗಿತ್ತು. ಆದರೆ, ಸಭೆ ಅಪೂರ್ಣವಾಗಿತ್ತು. ಇಂದು ಬೆಳಗ್ಗೆ ಮತ್ತೆ ಕಾವೇರಿ ನಿವಾಸದಲ್ಲಿ ಸಭೆ ನಡೆಸಲಾಯಿತು ಎಂದು ಸಚಿವ ಲಾಡ್ ತಿಳಿಸಿದರು.

ಸಚಿವ ಸಂತೋಷ್ ಲಾಡ್ ಮಾತನಾಡಿ, ಜಾತಿ ಸಮೀಕ್ಷೆ ಕರುತು ಯಾವುದೇ ಅಸಮಾಧಾನ ಇಲ್ಲ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಸಂಪುಟ ಸಭೆಯಲ್ಲಿ ಏನೂ ಗದ್ದಲ ಆಗಿಲ್ಲ. ಇದು ಜಾತಿ ಗಣತಿ ಅಲ್ಲ. ಆರ್ಥಿಕ ಸಾಮಾಜಿಕ ಸಮೀಕ್ಷೆ. ಕಾಂತರಾಜು ವರದಿ ತಿರಸ್ಕಾರ ಮಾಡಲು ಆಗಲ್ಲ. ಕಾಂತರಾಜು ವರದಿ ಕೂಡಾ ನಮ್ಮ ಮುಂದೆ ಇದೆ. ನಿಗದಿತ ಸಮಯದಲ್ಲಿಯೇ ಸಮೀಕ್ಷೆ ನಡೆಯಲಿದೆ ಎಂದು ತಿಳಿಸಿದರು.‌

- Advertisement - 

ಎಲ್ಲಾ ಸಮಾಜಗಳ ಸರ್ವೇ ಮಾಡಿದರೆ ಆ ಜಾತಿಗಳಲ್ಲಿರುವ ಬಡವರ ಸಂಖ್ಯೆ ಬಗ್ಗೆ ಮಾಹಿತಿ ಸಿಗಲಿದೆ. ಜಾತಿ ಒಡೆಯುವುದಾಗಲಿ ಅಥವಾ ಜಾತಿ ಹುಟ್ಟಿಸುವಾಗಲಿ ಇದರ ಉದ್ದೇಶವಲ್ಲ. ಸರ್ವೇ ಬಳಿಕ ಸಮಿತಿಯು ಫೈನಲ್ ಮಾಡಿ ವರದಿ ನೀಡಲಿದ್ದು, ಅದು ಕ್ಯಾಬಿನೆಟ್ ಮುಂದೆ ಬರಲಿದೆ. ಹೊಸದು ಹೇಗಾಯಿತು?. ಉಪ ಜಾತಿ ಹೇಗಾಯಿತು ಎಂಬ ಗೊಂದಲ ಇತ್ತು. ಬಿಜೆಪಿ ಸೇರಿದಂತೆ ಯಾರೇ ಆಗಲಿ ಕೋರ್ಟ್​ಗೆ ಹೋಗುವ ಹಕ್ಕಿದೆ. ಮಿಸ್ ಲೀಡ್ ಮಾಡುವುದು ಬೇಡ. ನಿಮ್ಮ ಅಭಿಪ್ರಾಯ ನಾವು ತೆಗೆದು ಕೊಳ್ಳುತ್ತೇವೆ. ಅಂತಿಮವಾಗಿ ಸಮಿತಿ ನಿರ್ಧಾರ ಮಾಡುತ್ತದೆ ಎಂದು ಸಚಿವ ಲಾಡ್ ಹೇಳಿದರು.

ಸಿಎಂ ನೇತೃತ್ವದ ಸಭೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾವೇರಿ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಜಾತಿ ಗೊಂದಲ ನಿವಾರಿಸಲು ಸೂಚಿಸಲಾಯಿತು. ವೀರಶೈವ ಲಿಂಗಾಯತ ಸಮುದಾಯದವರು ಜಾತಿ ಪಟ್ಟಿ ನೀಡಿದ್ದು
, ಅದರನ್ವಯ ಜಾತಿ ಪಟ್ಟಿ ಪರಿಷ್ಕರಿಸಲು ಸೂಚಿಸಲಾಗಿದೆ.

ಅದೇ ರೀತಿ ಕ್ರಿಶ್ಚಿಯನ್ ಜೊತೆ ಹಿಂದೂ ಜಾತಿ ಕೈ ಬಿಡುವ ಬಗ್ಗೆ ಚರ್ಚೆ ನಡೆದಿದೆ‌‌. ಒಂದು ವೇಳೆ ಗೊಂದಲ ಇದ್ದರೆ ಸಾರ್ವಜನಿಕರು ಇತರೆ ಕಾಲಂನಲ್ಲಿ ಜಾತಿ ಉಲ್ಲೇಖ ಮಾಡಲಿ. ಬಳಿಕ ಟ್ಯಾಬುಲೇಷನ್ ವೇಳೆ ಅವುಗಳನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಜಾತಿ ಪಟ್ಟಿ ಪರಿಷ್ಕರಿಸಿ, ಸಮೀಕ್ಷೆ ಆ್ಯಪ್​​ನಲ್ಲಿ ಸೂಕ್ತ ಬದಲಾವಣೆ ಮಾಡಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

Share This Article
error: Content is protected !!
";