ರೈತರ ಒಂದಿಂಚು ಭೂಮಿಯನ್ನು ವಕ್ಫ್ ಗೆ ಕೊಡಲು-ಸಚಿವ ಎಂ.ಬಿ.ಪಾಟೀಲ್

News Desk

ಚಂದ್ರವಳ್ಳಿ ನ್ಯೂಸ್, ವಿಜಯಪುರ:
ರೈತರನ್ನು ವಕ್ಫ್ ಹೆಸರಲ್ಲಿ ಒಕ್ಕಲೆಬ್ಬಿಸಲು ಬಿಡುವುದಿಲ್ಲ. ರೈತರ ಒಂದಿಂಚು ಭೂಮಿ ವಕ್ಫ್‌ ಗೆ ಕೊಡಲ್ಲ. ನಾನು ವಕ್ಫ್‌ಪರ ಇಲ್ಲ
, ವಕ್ಫ್‌ರಕ್ಷಣೆ ಮಾಡಲ್ಲ. ವಕ್ಫ್‌ಸಹ ಸಾಕಷ್ಟು ತಪ್ಪು ಮಾಡಿದೆ, ನಾನು ವಕ್ಫ್‌ತಪ್ಪುಗಳನ್ನ ಖಂಡಿಸುತ್ತೇನೆ. ಗೆಜೆಟ್ ನೋಟಿಪಿಕೇಶನ್ ನಲ್ಲಿ ತಪ್ಪಾಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದು ಹಾಕುತ್ತೇವೆ. ತಪ್ಪಾಗಿದ್ದಲ್ಲಿ ಸರಿಪಡಿಸುತ್ತೇವೆ ಎಂದು ಸಚಿವ ಎಂ.ಬಿ. ಪಾಟೀಲ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್ ವಕ್ಫ್‌ಅವಾಂತರಕ್ಕೆ ಬಿಜೆಪಿಯೇ ಕಾರಣ. ಬಿಜೆಪಿ ಪ್ರಣಾಳಿಕೆಯಲ್ಲಿ ವಕ್ಫ್‌ಆಸ್ತಿ ರಕ್ಷಣೆ ಮಾಡುತ್ತೇವೆ ಎಂದಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಕ್ಫ್‌ಪರವಾಗಿ ಪ್ರಶ್ನೆಗಳನ್ನ ಪಾರ್ಲಿಮೆಂಟ್ ನಲ್ಲಿ ಕೇಳಿದ್ದಾರೆ.

ವಿಜಯಪುರದಲ್ಲಿ ಬಂದು ರಸ್ತೆ ಮೇಲೆ ಹೋರಾಟ ಮಾಡಿದ್ದಾರೆ ಎಂದು ಕರಂದ್ಲಾಜೆ, ಬಿಜೆಪಿ ವಿರುದ್ಧ ಎಂ.ಬಿ. ಪಾಟೀಲ್‌ವಾಗ್ದಾಳಿ ನಡೆಸಿದ್ದಾರೆ.

ಎಂ.ಬಿ. ಪಾಟೀಲ್‌ ಮುಂದುವರೆದು ಮಾತನಾಡಿ, ಇದು ಬಿಜೆಪಿ ಅವಧಿಯಲ್ಲಿ ಆಗಿದ್ದು, ಬಿಜೆಪಿ ಸರ್ಕಾರದ ನಿರ್ದೇಶನದಂತೆ, ಸರ್ಕ್ಯೂಲರ್ ನಂತೆ ಆಗಿದೆ. ವಿಶ್ವೇಶ್ವರಯ್ಯ ಕಲಿತ ಶಾಲೆ ಸೇರಿ, ಯಾವುದೇ ದೇಗುಲ, ಮಠ, ಸರ್ಕಾರಿ ಆಸ್ತಿ ವಕ್ಫ್‌ ಗೆ ಹೋಗೊಕೆ ಬಿಡಲ್ಲ.

ಇದು ಸಿಎಂ ನಿಲುವು, ನನ್ನ ನಿಲುವು, ಸರ್ಕಾರದ ನಿಲುವು, ಬಿಜೆಪಿ ಹೊಲಸು ರಾಜಕಾರಣ ಮಾಡುತ್ತಿದೆ ಎಂದು ಎ.ಬಿ.ಪಾಟೀಲ್ ಟೀಕಿಸಿದ್ದಾರೆ.

ಬಿಜೆಪಿ ಸರ್ಕಾರ 10 ವರ್ಷ ಮಲಗಿತ್ತಾ?. ಇಷ್ಟು ವರ್ಷ ಏನ್ ಮಾಡುತ್ತಿದ್ರು, ಈಗ ರೈತರು ನೆನೆಪಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ, ಜೈನ, ಕ್ರೈಸ್ತ, ಮುಸ್ಲಿಂ, ಸಿಖ್, ಶಾಲೆ-ಕಾಲೇಜು ಜಮೀನು ಸೇರಿದಂತೆ ಯಾವುದೇ ಭೂಮಿಯನ್ನು ವಕ್ಫ್‌ ಗೆ ಬಿಟ್ಟುಕೊಡುವ ಮಾತೇ ಇಲ್ಲ. ಬಿಜೆಪಿಯವರು ರೈತರನ್ನ ಕನ್ಪ್ಯೂಜ್ ಮಾಡುತ್ತಿದ್ದಾರೆ ಎಂದು ಪಾಟೀಲ್ ತಿಳಿಸಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";