ಆರೋಪಿ ರಾಜೀವ್ ಗೌಡ ಪರ ನಿಂತ ಸಚಿವ ಮುನಿಯಪ್ಪ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ಅವರು ಆರೋಪಿ ರಾಜೀವ ಗೌಡ ಪರ ಬ್ಯಾಟಿಂಗ್​​ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ರಾಜೀವ್ ಗೌಡ ಸೌಮ್ಯ ಸ್ವಭಾವದವರಾಗಿದ್ದು, ಕರೆದು ಆತನಿಗೆ ಬುದ್ಧಿ ಹೇಳುತ್ತೇನೆ.

ರಾಜಕೀಯದಲ್ಲಿರುವ ವ್ಯಕ್ತಿ ಶಾಂತ ಸ್ವಭಾವದಿಂದ ಇರಬೇಕು. ಅಧಿಕಾರದಲ್ಲಿ ಇರುವವರಿಗೆ ಯಾರೂ ಹೀಗೆ ಮಾತನಾಡಬಾರದು ಎಂದಿದ್ದಾರೆ. ಅಲ್ಲದೆ ಶಿಡ್ಲಘಟ್ಟದಲ್ಲಿ ಜೆಡಿಎಸ್​ನವರು ಈ ಹಿಂದೆ ಬ್ಯಾನರ್ ಹಾಕಿದಾಗ ತೆಗೆಸಿಲ್ಲ, ಆದರೆ ಈಗ ತೆಗೆದಿದ್ದಾರೆ ಅಂತಾ ರಾಜೀವ್ ಹೇಳ್ತಿದ್ದಾರೆ.

- Advertisement - 

ಆ ಅಧಿಕಾರಿ ಜೆಡಿಎಸ್​ ಪಕ್ಷದ ಪೋಸ್ಟರ್, ಬ್ಯಾನರ್ ತೆಗೆಯುತ್ತಿಲ್ಲ. ಕೇವಲ ಕಾಂಗ್ರೆಸ್​ ಬ್ಯಾನರ್​ ತೆಗೆದಿದ್ದಾರೆ ಎಂಬುದು ರಾಜೀವ್ ವಾದ ಎಂದು ಸಚಿವ ಮುನಿಯಪ್ಪ ಅವರು ತಿಳಿಸುವ ಮೂಲಕ ಆರೋಪಿ ಪರ ಇದ್ದು ಸಮರ್ಥಿಸಿಕೊಂಡಿದ್ದಾರೆ.

 

- Advertisement - 

 

Share This Article
error: Content is protected !!
";