ಪಾಕ್ ಪ್ರಜೆಗಳ ಮಾಹಿತಿ ಸಂಗ್ರಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ -ಸಚಿವ ಪರಮೇಶ್ವರ್

News Desk

ಚಂದ್ರವಳ್ಳಿ ನ್ಯೂಸ್, ಮಡಿಕೇರಿ:
ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ
26 ಅಮಾಯಕರ ಜೀವ ಬಲಿ ತೆಗೆದುಕೊಂಡಿದ್ದು ಇಡೀ ದೇಶವೇ ಖಂಡನೆ ವ್ಯಕ್ತಪಡಿಸುತ್ತಿದೆ. ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಕೇಂದ್ರ ಸರ್ಕಾರ ಕೆಲ ಮಹತ್ವದ ತೀರ್ಮಾನಗಳನ್ನು ಕೈಗೊಂಡಿದ್ದು, ಭಾರತದಲ್ಲಿ ನೆಲೆಸಿರೋ ಪಾಕಿಸ್ತಾನ ಪ್ರಜೆಗಳನ್ನು ಪಟ್ಟಿ ಮಾಡಿ ಅವರ ದೇಶಕ್ಕೆ ಕಳುಹಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದ ಎಲ್ಲಾ ಮುಖ್ಯಂತ್ರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿ, ಪಾಕ್ ಪ್ರಜೆಗಳ ಮಾಹಿತಿ ಸಂಗ್ರಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರದ ಆದೇಶದಂತೆ ಎಲ್ಲಾ ಎಸ್​ಪಿಗಳಿಗೆ ಸೂಚಿಸಲಾಗಿದ್ದು, ಈಗಾಗಲೇ ಅಂಕಿ ಅಂಶಗಳ ಸಂಗ್ರಹ ಕಾರ್ಯ ನಡೆಯುತ್ತಿದೆ. ವರದಿ ಬಂದ ಕೂಡಲೇ ಪಾಕ್ ಪ್ರಜೆಗಳನ್ನು ವಾಪಸ್ ಕಳುಹಿಸುತ್ತೇವೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

 ಕೇಂದ್ರ ಸರ್ಕಾರ ಕೆಲವರಿಗೆ ವಿನಾಯಿತಿ ನೀಡಿದೆ. ದೀರ್ಘಾವಧಿ ವೀಸಾ, ಮದುವೆ ಆಗಿರುವವರಿಗೆ ವಿನಾಯಿತಿ ನೀಡಿದೆ. ಅವರನ್ನು ಹೊರತುಪಡಿಸಿ ಉಳಿದೆಲ್ಲರನ್ನೂ ಹೊರಕಳಿಸಲಾಗುತ್ತೆ. ಅಲ್ಪಾವಧಿ ವೀಸಾ, ವಿದ್ಯಾರ್ಥಿ, ಪ್ರವಾಸಿಗರ ವೀಸಾ ಸೇರಿ ಇತರೆ ವೀಸಾದಡಿಯಲ್ಲಿ ಇರುವವರನ್ನು ಪಾಕಿಸ್ತಾನಕ್ಕೆ ವಾಪಸ್ ಕಳಿಸುತ್ತೇವೆ ಎಂದು ಸಚಿವ ಪರಮೇಶ್ವರ್ ಹೇಳಿದರು.

 

 

Share This Article
error: Content is protected !!
";