ಪೌರ ಕಾರ್ಮಿಕರಿಗೆ ಪ್ರತಿ ಮಾಹೆಯಾನ ವೇತನ ಪಾವತಿ: ಸಚಿವ ರಹೀಂ ಖಾನ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 11 ಜನ ಪೌರಕಾರ್ಮಿಕರಿಗೆ ಪ್ರತಿ ಮಾಹೆಯಾನ ವೇತನವನ್ನು ಹಾರೋಹಳ್ಳಿ ಪಟ್ಟಣ ಪಂಚಾಯಿತಿಯ ಸ್ವಂತ ನಿಧಿಯಿಂದ ಸಮಯಕ್ಕೆ ಸರಿಯಾಗಿ ಪಾವತಿಸಲಾಗಿರುತ್ತದೆ ಎಂದು ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ತಿಳಿಸಿದರು.

ವಿಧಾನಪರಿಷತ್‍ನ ಅಧಿವೇಶನದಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಎಸ್.ರವಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಹನ್ನೊಂದು ಜನ ಪೌರಕಾರ್ಮಿಕರು ಜಿಲ್ಲಾಧಿಕಾರಿಗಳ ವಿಶೇಷ ನೇಮಕಾತಿ ನಿಯಮದಡಿ ನೇರ ನೇಮಕಾತಿಯಾಗಿರುತ್ತಾರೆ.

- Advertisement - 

ಸದರಿ ನೇಮಕಾತಿಯನ್ನು ವರ್ಷದ ಮಧ್ಯಂತರ ಅವಧಿಯಲ್ಲಿ ಆದೇಶಿಸಿದ್ದರಿಂದ, ಆಯವ್ಯಯದಲ್ಲಿ ಅಳವಡಿಸಿಕೊಳ್ಳಲು ಅವಕಾಶವಿಲ್ಲದಿದ್ದ  ಕಾರಣ ವೇತನ ಪಾವತಿಸಲು ವಿಳಂಬವಾಗಿರುತ್ತದೆ. ಇನ್ನು ಮುಂದೆ ಸಮಯಕ್ಕೆ ಸರಿಯಾಗಿ ವೇತನ ಪಾವತಿಸಲಾಗುವುದು ಎಂದು ತಿಳಿಸಿದರು.

 

- Advertisement - 

 

Share This Article
error: Content is protected !!
";