ಸದ್ಯಕ್ಕಿಲ್ಲ ಡೀಸೆಲ್ ಕೊರತೆ ಆತಂಕ; ಬೆಂಗಳೂರು ಕರಗಕ್ಕೆ ಸಚಿವ ರಾಮಲಿಂಗ ರೆಡ್ಡಿ ಆಹ್ವಾನ

News Desk
- Advertisement -  - Advertisement - 

​ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ರಸ್ತೆ ಸಾರಿಗೆ ನಿಗಮಗಳಿಗೆ ಸದ್ಯಕ್ಕೆ ಡೀಸೆಲ್ ಕೊರತೆಯ ಯಾವುದೇ ಆತಂಕವಿಲ್ಲ. ಆದರೆ ಜಾಗತಿಕ ಮಟ್ಟದಲ್ಲಿ ಯುದ್ಧದ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗಬಹುದು ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.

​ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರಿಗೆ ಮತ್ತು ರಾಜಕೀಯದ ಹಲವು ಪ್ರಮುಖ ವಿಷಯಗಳ ಕುರಿತು ಮಾಹಿತಿ ಹಂಚಿಕೊಂಡರು.

- Advertisement - 

​ಸಾರಿಗೆ ನಿಗಮಗಳ ಸ್ಥಿತಿಗತಿ-
​ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಡೀಸೆಲ್ ಅಭಾವವಿದೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿದ ಸಚಿವರು
, “ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ತಕ್ಷಣದ ಅಗತ್ಯಕ್ಕೆ ತಕ್ಕಷ್ಟು ದಾಸ್ತಾನು ಇದೆ. ಆದರೆ ಅಂತರಾಷ್ಟ್ರೀಯ ಮಟ್ಟದ ಯುದ್ಧದ ಸನ್ನಿವೇಶಗಳು ಮುಂದುವರಿದರೆ ಮಾತ್ರ ಭವಿಷ್ಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು,” ಎಂದು ಎಚ್ಚರಿಸಿದರು.

​ವೈಭವದ ಬೆಂಗಳೂರು ಕರಗ ಮಹೋತ್ಸವ-
​ಐತಿಹಾಸಿಕ ಬೆಂಗಳೂರು ಕರಗ ಆಚರಣೆಯ ಕುರಿತು ಮಾತನಾಡಿದ ಅವರು
, ಈ ಬಾರಿ ಕರಗವು ಏಪ್ರಿಲ್ 1ರ ಮಧ್ಯರಾತ್ರಿ 12:30ಕ್ಕೆ ನಡೆಯಲಿದೆ ಎಂದು ತಿಳಿಸಿದರು.

- Advertisement - 

​ವಿಶೇಷ ಸಿದ್ಧತೆ: ಈ ಬಾರಿ ನಗರಾದ್ಯಂತ ಅದ್ಧೂರಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ​ಗಣ್ಯರಿಗೆ ಆಹ್ವಾನ: ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಲಾಗಿದ್ದು, ಇಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಆಹ್ವಾನ ನೀಡಲು ಬಂದಿರುವುದಾಗಿ ತಿಳಿಸಿದರು.

​ಸಾರ್ವಜನಿಕ ಸೇವೆ: ಕರಗದ ಸಮಯದಲ್ಲಿ ಶುಚಿತ್ವ ಕಾಪಾಡಲು 24 ಗಂಟೆಯೂ ಕಸ ವಿಲೇವಾರಿ ಮಾಡಲು ಸೂಚಿಸಲಾಗಿದೆ. ಸಂಚಾರ ದಟ್ಟಣೆ ಉಂಟಾಗದಂತೆ ವಿಶೇಷ ಕ್ರಮ ಕೈಗೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವಂತೆ ಕರೆ ನೀಡಿದರು.

​ಬಿಜೆಪಿ ವಿರುದ್ಧ ರಾಜಕೀಯ ವಾಗ್ದಾಳಿ-
​ಮುಸ್ಲಿಂ ಮತಗಳನ್ನು ಸೆಳೆಯಲು ಬಿಜೆಪಿ ನಡೆಸುತ್ತಿರುವ ಪ್ರಯತ್ನದ ಕುರಿತು ಸಚಿವರು ಕಟುವಾಗಿ ಟೀಕಿಸಿದರು.

​”ಮುಸ್ಲಿಂ ಸಮುದಾಯದವರು ಬಿಜೆಪಿಗೆ ಮತ ಹಾಕುವುದಿಲ್ಲ. ಕಳೆದ 14 ವರ್ಷಗಳಿಂದ ಅವರನ್ನು ಬಿಜೆಪಿ ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ನೀಡಿದೆ, ಆದರೆ ಬಿಜೆಪಿ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಇಡುವ ಕೆಲಸ ಮಾಡುತ್ತಿದೆ,” ಎಂದು ಆರೋಪಿಸಿದರು.

​ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡದ ವಿಚಾರವಾಗಿ ಪ್ರತಿಕ್ರಿಯಿಸಿ, “ಟಿಕೆಟ್ ಕೇಳಿದ್ದು ನಿಜ, ಸದ್ಯಕ್ಕೆ ಕೊಡಲು ಸಾಧ್ಯವಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅವರಿಗೆ ರಾಜ್ಯಸಭೆ ಅಥವಾ ಪರಿಷತ್ ಸ್ಥಾನಗಳನ್ನು ನೀಡಲಾಗುವುದು,” ಎಂದರು.

​ಪಾಲಿಕೆ ಬಜೆಟ್‌ಗೆ ಸರ್ಕಾರದ ಬೆಂಬಲ-
​ಬಿಬಿಎಂಪಿ ಬಜೆಟ್ ಕುರಿತು ಮಾತನಾಡಿದ ಅವರು
, ಪಾಲಿಕೆಗೆ ಹಣದ ಕೊರತೆಯಾದಾಗ ಸರ್ಕಾರ ನೆರವು ನೀಡುವುದು ಮೊದಲಿನಿಂದಲೂ ನಡೆದು ಬಂದಿದೆ. ಶಾರ್ಟೇಜ್ ಇರುವ ಹಣವನ್ನು ಸರ್ಕಾರ ಭರಿಸಲಿದೆ ಎಂದು ಸ್ಪಷ್ಟಪಡಿಸಿದರು.

Share This Article
error: Content is protected !!
";