ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಎಂಟಿಸಿ ವತಿಯಿಂದ ಹೊಸ ಎಲೆಕ್ಟ್ರಿಕ್ ವಾಯು ವಜ್ರ ಬಸ್‌ಗಳ ಸೇವೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್, ಡಾ. ಎನ್. ವಿ. ಪ್ರಸಾದ್ (ಐಎಎಸ್), ರಾಮಚಂದ್ರನ್ ಆರ್ (ಐಎಎಸ್) ಮತ್ತು ಬಿಐಎಎಲ್‌ನ ಮುಖ್ಯ ಹಣಕಾಸು ಅಧಿಕಾರಿ ಭಾಸ್ಕರ್ ರಾವ್ ಸೇರಿದಂತೆ ಅನೇಕರು ಹಾಜರಿದ್ದರು.
ಹವಾನಿಯಂತ್ರಿತ ವಿದ್ಯುತ್ ಬಸ್ – ಬೆಂಗಳೂರಿನ ಹಸಿರು ಸಂಚಾರದತ್ತ ದೊಡ್ಡ ಹೆಜ್ಜೆ! ವಿಶ್ವಮಟ್ಟದ AC ಸೌಲಭ್ಯವುಳ್ಳ, ಪರಿಸರ ಸ್ನೇಹಿ ವಿಮಾನ ನಿಲ್ದಾಣ ಬಸ್ ಸೇವೆ ಆರಂಭ
ಬಿಎಂಟಿಸಿ ಬಸ್ ಪಡೆ ಶೀಘ್ರದಲ್ಲೇ 10,000 ದಾಟಲಿದೆ – ಅದರಲ್ಲಿ ಹೆಚ್ಚಿನವು ಶೂನ್ಯ ಮಾಲಿನ್ಯ ಬಸ್ಸುಗಳು, ಮಾಲಿನ್ಯ ನಿಯಂತ್ರಣ ಮತ್ತು ಇಂಧನ ವೆಚ್ಚ ಕಡಿತದತ್ತ ಮಹತ್ವದ ಮುಂದಡಿಗೆ ಹೆಜ್ಜೆ ಇಡಲಾಗಿದೆ ಎಂದು ಸಚಿವರು ಹೇಳಿದರು.

