ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹನಿಟ್ರ್ಯಾಪ್, ಫೋನ್ ಟ್ಯಾಪ್, ಕೊಲೆ ಯತ್ನ ಅಂತ ಬೊಬ್ಬಿರಿದ ಕರ್ನಾಟಕ ಕಾಂಗ್ರೆಸ್ ಸಚಿವರು ಈಗ ಸುಮ್ಮನಾಗಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ಮಾನವನ್ನು ಪಣಕ್ಕಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಕಾಂಗ್ರೆಸ್ ಪಕ್ಷದಲ್ಲಿನ ಕುರ್ಚಿ ಕಿತ್ತಾಟದ ಮುಂದುವರಿದ ಭಾಗವಾಗಿ ಪ್ರಕರಣ ನಡೆದಿದೆ ಎಂಬ ಅನುಮಾನ ನಿಜವಾಗಿದೆ. ವಿಚಾರಣೆಗೆ ಕರೆದರೆ ಹಬ್ಬದ ಬಳಿಕ ಬರುವೆ ಎನ್ನುತ್ತಾ ದಿನ ದೂಡುತ್ತಿದ್ದಾರೆ ಎಂದು ಬಿಜೆಪಿ ದೂರಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಬಾಯಿ ಬಿಡದೆ, ಪ್ರಕರಣವನ್ನು ಮುಚ್ಚಲು ಪೂರ್ಣ ತಯಾರಿ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.