ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನವದೆಹಲಿಯ ಸಂಸತ್ ಭವನದಲ್ಲಿ ಬುಧವಾರ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿದರು.
ಇದೇ ವೇಳೆ, 114 ಕಿ.ಮೀ ಉದ್ದದ ಹಾಸನ ಹಿರಿಯೂರು ಆರ್ಥಿಕ ಗ್ರೀನ್‌ಫೀಲ್ಡ್ ಕಾರಿಡಾರ್ ಕಾಮಗಾರಿ, ರಾಷ್ಟ್ರೀಯ ಹೆದ್ದಾರಿ 69ರ ಬಡವನಹಳ್ಳಿ ಭೈರೆನಹಳ್ಳಿ ಭಾಗದ 32 ಕಿ.ಮೀ ಚತುಷ್ಪಥ ರಸ್ತೆ ಕಾಮಗಾರಿ ಹಾಗೂ
ತುಮಕೂರು ನಗರಕ್ಕೆ ನಂದಿಹಳ್ಳಿಯಿಂದ (NH 48) ಮಲ್ಲಸಂದ್ರದವರೆಗೆ ಮತ್ತು ಮಲ್ಲಸಂದ್ರದಿಂದ ವಸಂತನರಾಸಾಪುರದವರೆಗೆ 45 ಕಿ.ಮೀ ಬೈಪಾಸ್ ರಸ್ತೆ ಕಾಮಗಾರಿಗಳಿಗೆ ಅನುಮೋದನೆ ನೀಡುವಂತೆ ಕೇಂದ್ರ ಸಚಿವ ವಿ.ಸೋಮಣ್ಣ ಕೋರಿಕೊಂಡರು.
ಹಾಗೆಯೇ, ತಿಪಟೂರು ತಾಲ್ಲೂಕು ಕೆ.ಬಿ.ಕ್ರಾಸ್‌ಗೆ ವ್ಯಾಪ್ತಿಯಲ್ಲಿ ಭೂಸ್ವಾಧಿನದಲ್ಲಾದ ತೊಂದರೆಯನ್ನು ನಿವಾರಿಸಿ ಭೂಮಾಲಿಕರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿಕೊಳ್ಳಲಾಯಿತು. ಕೇಂದ್ರ ಸಚಿವರು ತುಮಕೂರಿನ ಅಭಿವೃದ್ದಿ ವಿಚಾರವಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವಿ.ಸೋಮಣ್ಣ ತಿಳಿಸಿದ್ದಾರೆ.

