ಚಂದ್ರಳ್ಳಿ ನ್ಯೂಸ್, ಹಿರಿಯೂರು:
ಮಳೆಯಿಂದ ಮೇಲ್ಚಾವಣಿ ಕುಸಿದು ಸಾವನಪ್ಪಿದ ಕುಟುಂಬಕ್ಕೆ 5 ಲಕ್ಷ ಚೆಕ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ವಿತರಿಸಿದರು.
ತಾಲೂಕಿನ ಬ್ಯಾಡರಹಳ್ಳಿ ಗ್ರಾಮದ ಮೀನಾಕ್ಷಮ್ಮ ಮಹಂತೇಶ್ ರವರು ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ವಾಸದ ಮನೆ ಮೇಲ್ಛಾವಣಿ ಕುಸಿದು ಮೃತ ಪಟ್ಟಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಸಂತ್ರಸ್ತ ಕುಟುಂಬದ ಮನೆಗೆ ಭೇಟಿ ನೀಡಿ ಸ್ವಾಂತನ ಹೇಳುವುದರ ಮೂಲಕ ಸರ್ಕಾರದ ವತಿಯಿಂದ 5 ಲಕ್ಷ ರೂ.ಗಳ ಪರಿಹಾರ ಚೆಕ್‌ವಿತರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಾಜೇಶ್ ಕುಮಾರ್, ಹಿರಿಯೂರು ತಾಲ್ಲೂಕು ಬ್ಲಾಕ್ ಅಧ್ಯಕ್ಷ ಖಾದಿ ಜೆ.ರಮೇಶ್, ಈರಲಿಂಗೇಗೌಡ, ಕಂದಿಕೆರೆ ಸುರೇಶ್ ಬಾಬು, ಬ್ಯಾಡರಹಳ್ಳಿ ಪಂಚಾಯಿತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಣ್ಮುಖ, ಐನಹಳ್ಳಿ ಅಮೃತೇಶ್ವರಸ್ವಾಮಿ, ಕೆಡಿಪಿ ಸದಸ್ಯ ದೊಡ್ಡಘಟ್ಟ ಶಿವಕುಮಾರ್, ಬ್ಯಾಡರಹಳ್ಳಿ ಮಂಜಣ್ಣ, ಬ್ಯಾಡರಹಳ್ಳಿ ರವಿ, ಮಂಜುನಾಥ್, ನರಸಿಂಹಮೂರ್ತಿ, ಬ್ಯಾಡರಹಳ್ಳಿ ಗ್ರಾಪಂ ಅಧ್ಯಕ್ಷ ಓಬಳೇಶ್, ಟಿ.ಓಬೇನಹಳ್ಳಿ ಮೂರ್ತಿ, ನಾಗೇಶ್, ತಿಪ್ಪೀರಣ್ಣ ಮುಖಂಡರು ಉಪಸ್ಥಿತರಿದ್ದರು.