ನಗರಸಭೆಯೊಳಗೆ ಬ್ಯಾಂಕ್ ಕೌಂಟರ್ ಆರಂಭ:  ಸಚಿವ ಸುಧಾಕರ್

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ನಾಗರಿಕರು ಮನೆ ಕಟ್ಟಡಗಳ ಅಂಗಡಿ ಮುಗ್ಗಟ್ಟುಗಳ ಉದ್ದಿಮೆಗಳ ಕಂದಾಯ ಕಟ್ಟಲು ನಗರದ ಬ್ಯಾಂಕ್ ಗಳಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ ನಗರಸಭೆಯೊಳಗೆ ಬ್ಯಾಂಕ್ ಆಫ್ ಬರೋಡದ ಕೌಂಟರ್ ತೆರೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ನಗರಸಭೆಯಲ್ಲಿ ನಗರದ ಜನರಿಗೆ ಅನುಕೂಲವಾಗುವಂತೆ ನಗರಸಭೆಯಲ್ಲಿಯೇ ಬ್ಯಾಂಕ್ ಆಫ್ ಬರೋಡದ ಕೌಂಟರ್ ಒಂದನ್ನು ಪ್ರಾರಂಭಿಸಿ ಅವರು ಮಾತನಾಡಿದರು.

ಬಗ್ಗೆ ಬ್ಯಾಂಕ್ ಆಫ್ ಬರೋಡಾದ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ, ಚರ್ಚಿಸಿದಾಗ ಅವರು ಬಹಳ ಸಂತೋಷದಿಂದ ನಗರಸಭೆಯಲ್ಲಿ ತಮ್ಮ ಬ್ಯಾಂಕಿನ ಕೌಂಟರ್ ತೆರೆಯಲು ಒಪ್ಪಿಕೊಂಡರು.ಅದಕ್ಕಾಗಿ ಅವರುಗಳಿಗೆ ನಗರದ ಜನತೆಯ ಹಾಗೂ ನಗರಸಭೆ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಚಿವರು ಹೇಳಿದರು.

ನಗರದ ನಾಗರಿಕರು ಬ್ಯಾಂಕ್ ಕೌಂಟರ್  ಸೌಲಭ್ಯ ಪಡೆದು ಹಣ ಕಟ್ಟುವುದರಿಂದ ಅವರ ಅಮೂಲ್ಯ ಸಮಯ ಹಾಗೂ ಶ್ರಮ ಉಳಿತಾಯವಾಗುತ್ತದೆ.ಆದ್ದರಿಂದ ಕೌಂಟರ್ ಸದುಪಯೋಗ ನಗರದ ಜನತೆ ಪಡೆದುಕೊಳ್ಳಬೇಕು ಎಂದರಲ್ಲದೆ, ನಗರದ ಜನತೆ ಕಂದಾಯ ಕಟ್ಟಿದರೆ ಮಾತ್ರ ನಗರದ ಅಭಿವೃದ್ಧಿ ಸಾಧ್ಯ ಆದ್ದರಿಂದ ನಾಗರಿಕರು ತಮ್ಮ ಮನೆ, ಕಟ್ಟಡ, ಉದ್ದಿಮೆಗಳ ಕಂದಾಯ ಕಟ್ಟುವ ಮೂಲಕ ನಗರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಚಿವರು ಕರೆ ನೀಡಿದರು.

ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಅಜಯ್ ಕುಮಾರ್, ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ನಗರಸಭೆ ಪೌರಾಯುಕ್ತ .ವಾಸೀಂ, ವ್ಯವಸ್ಥಾಪಕಿ ಬಿ.ಆರ್.ಮಂಜುಳಾ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ನಗರಸಭೆ ಸದಸ್ಯರುಗಳಾದ ಈರಲಿಂಗೇಗೌಡ, ಎಂ.ಡಿ.ಸಣ್ಣಪ್ಪ, ಗುಂಡೇಶ್ ಕುಮಾರ್, ಶಿವಕುಮಾರ್, ರಮೇಶ್ ಬಾಬು,  ಶಿವರಂಜಿನಿಯಾದವ್, ಗೀತಾ ಗಂಗಾಧರ್ ಸೇರಿದಂತೆ ಸಂಧ್ಯಾ, ಮೀನಾಕ್ಷಿ, ಲೆಕ್ಕಅಧೀಕ್ಷಕ ಗೋವಿಂದರಾಜು, ಜನಾರ್ಧನ್ ಕರಡಿ, ಸೇರಿದಂತೆ ನಗರಸಭೆ ನೌಕರರು ಹಾಗೂ ಸಿಬ್ಬಂದಿ, ನಗರದ ನಾಗರೀಕರು ಉಪಸ್ಥಿತರಿದ್ದರು.

 

 

- Advertisement -  - Advertisement - 
Share This Article
error: Content is protected !!
";