ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇತ್ತೀಚೆಗೆ ಯುವಕನೊಬ್ಬನ ಕ್ರೌರ್ಯದಿಂದ ಹಿರಿಯೂರು ತಾಲೂಕಿನ ಕೋವೇರಹಟ್ಟಿಯ ವಿದ್ಯಾರ್ಥಿನಿ ವರ್ಷಿತಾಳಿಗೆ ಪೆಟ್ರೋಲ್ ಸುರಿದು ಸುಟ್ಟು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಕುಟುಂಬದ ತಾಯಿಗೆ ಜಿಲ್ಲಾಡಳಿತ ಉದ್ಯೋಗ ನೀಡಿದೆ.
ಮೃತ ವಿದ್ಯಾರ್ಥಿನಿ ವರ್ಷಿತಾಳ ತಾಯಿಗೆ ಅಡುಗೆ ಸಹಾಯಕರ ನೌಕರಿ ಆದೇಶದ ನೇಮಕಾತಿ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಸಂತ್ರಸ್ತ ಕುಟುಂಬದ ಜ್ಯೋತಿ ಅವರಿಗೆ ವಿತರಣೆ ಮಾಡಿದರು. ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

