ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವಿಧಾನಸಭಾ ಕ್ಷೇತ್ರವು ಸಾಮಾನ್ಯ ಕ್ಷೇತ್ರವಾದಗಿನಿಂದ ಇಲ್ಲಿಯವರೆಗೂ ಡಿ.ಸುಧಾಕರ್ ರವರು ಎರಡು ಬಾರಿ ಸಚಿವರು ಹಾಗೂ ಒಂದು ಬಾರಿ ಶಾಸಕರಾಗಲು ನಮ್ಮ ತಾಲೂಕಿನಲ್ಲಿ ಮಾದಿಗ ಸಮುದಾಯದ ಮತದಾರರ ಬಹುದೊಡ್ಡ ಕೊಡುಗೆಯಿದೆ ಎಂದು ಮಾದಿಗ ಸಮುದಾಯದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿರಿಯೂರು ತಾಲೂಕಿನಲ್ಲಿ ಪರಿಶಿಷ್ಟ ಜಾತಿಯ ಬಹುದೊಡ್ಡ ಮಾದಿಗ ಸಮುದಾಯದ ಋಣ ತೀರಿಸಲು ಸಚಿವ ಸುಧಾಕರ್ ಅವರಿಗೆ ಒಂದು ಸುವರ್ಣ ಅವಕಾಶ ಬಂದಿದ್ದು ಆ ಕೆಲಸವನ್ನು ಸಚಿವರು ನಿಷ್ಠೆಯಿಂದ ಮಾಡಬೇಕು ಎಂದು ಮುಖಂಡರು ಒತ್ತಾಯಿಸಿದರು.
ಒಳಮೀಸಲಾತಿ ಜಾರಿಗಾಗಿ ಸರ್ಕಾರವು ಆಗಸ್ಟ್-16 ರಂದು ವಿಶೇಷ ಸಂಪುಟ ಸಭೆ ಕರೆದಿದ್ದು ಅ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರು ಒಳ ಮೀಸಲಾತಿ ಜಾರಿಗಾಗಿ ಮಾದಿಗರ ಪರ ಹಕ್ಕೊತ್ತಾಯ ಮಂಡಿಸಬೇಕೆಂದು ಮಾದಿಗ ಸಮಾಜದ ಮುಖಂಡರು ಒತ್ತಾಯಿಸಿದರು.
ಹಿರಿಯೂರು ಪ್ರವಾಸಿ ಮಂದಿರದಲ್ಲಿ ದಲಿತ ಪರ ಸಂಘಟನೆಗಳ ಒಕ್ಕೂಟ ಮತ್ತು ಒಳ ಮೀಸಲಾತಿ ಹೋರಾಟಗಾರರಾದ ಮಹಾನಾಯಕ ದಲಿತಸೇನೆ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಕೆ.ಪಿ.ಶ್ರೀನಿವಾಸ್, ಡಿ.ಎಸ್.ಎಸ್ ಹಿರಿಯೂರು ತಾಲೂಕು ಅಧ್ಯಕ್ಷ ಕೆ.ಆರ್.ರಘುನಾಥ್ ಕೆ.ಆರ್.ಹಳ್ಳಿ, ಅಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತರಾಯ ಬ್ಯಾಡರಹಳ್ಳಿ,
ಮಾದಿಗ ದಂಡೋರ ಸಂಘಟನೆಯ ತಾಲೂಕು ಅಧ್ಯಕ್ಷ ಬೋರನಕುಂಟೆ ಕರಿಯಪ್ಪ, ಮಾನವ ಬಂಧುತ್ವ ವೇದಿಕೆಯ ತಾಲೂಕು ಅಧ್ಯಕ್ಷ ಮಾರುತೇಶ್ ಕೂನಿಕೆರೆ, ಶಿವು ಖಂಡೇನಹಳ್ಳಿ, ಓಂಕಾರ್ ಮಸ್ಕಲ್ ಮಟ್ಟಿ, ಕರ್ಣಕುಮಾರ್ ಘಾಟ್ ಬೆಳ್ಳಿ ಸಮುದ್ರದಳ್ಳಿ, ಮಹೇಶ್ ಕಾಟನಾಯಕನಹಳ್ಳಿ ಈ.ಶಿವಣ್ಣ ಕಾಟನಾಯಕನಹಳ್ಳಿ ಮುಂತಾದವರು ಉಪಸ್ಥಿತರಿದ್ದರು.

