ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ವಯಂಘೋಷಿತ ಸಾಮಾಜಿಕ ನ್ಯಾಯದ ಪ್ರತಿಪಾದಕರು, so-called ದಲಿತರ ಚಾಂಪಿಯನ್ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಸಿಎಂ ಸಿದ್ದರಾಮಯ್ಯ ಅವರಿಗೆ SCSP/TSP ಹಣ ದುರ್ಬಳಕೆ ಬಗ್ಗೆ ಪರಿಶಿಷ್ಟ ಸಮುದಾಯ ಮಾಡುತ್ತಿರುವ ಹೋರಾಟ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಮಾತೆತ್ತಿದ್ದರೆ ಬುದ್ಧ, ಬಸವ, ಅಂಬೇಡ್ಕರ್ ಎಂದು ಬುರುಡೆ ಬಿಡುವ ಸಚಿವ ಹೆಚ್.ಸಿ ಮಹಾದೇವಪ್ಪ ಅವರಿಗೆ ಪರಿಶಿಷ್ಟರ ಕೂಗು ಕೇಳುತ್ತಿಲ್ಲವೇ?
ಪ್ರಪಂಚದ ಎಲ್ಲ ಆಗುಹೋಗುಗಳಲ್ಲೂ ಮೂಗು ತೂರಿಸಿ ಹೃದಯ ವೈಶಾಲ್ಯತೆ ಮೆರೆಯುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ದಲಿತರ ಹಣ ದುರ್ಬಳಕೆ ನಿಲ್ಲಿಸಿ ಎಂದು ಮುಖ್ಯಮಂತ್ರಿಗಳಿಗೆ ಒಂದು ಪತ್ರ ಬರೆಯಬೇಕು ಅಂತ ಹೃದಯ ಮಿಡಿಯುತ್ತಿಲ್ಲವೇ? ನಾಚಿಕೆಯಾಗಬೇಕು ಕರ್ನಾಟಕ ಕಾಂಗ್ರೆಸ್ ಪಕ್ಷದ ಡೋಂಗಿತನಕ್ಕೆ ಎಂದು ಅಶೋಕ್ ವಾಗ್ದಾಳಿ ಮಾಡಿದ್ದಾರೆ.

