ಲೂಟಿಕೋರ ಕಾಂಗ್ರೆಸ್ ಸರ್ಕಾರದ ದುರಾಡಳಿತ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲೂಟಿಕೋರ ಕರ್ನಾಟಕ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಉದ್ಯೋಗಾಕಾಂಕ್ಷಿಗಳ ಸರ್ಕಾರಿ ಕೆಲಸದ ಕನಸು ಭಗ್ನವಾಗಿದೆ. ರಾಜ್ಯದಲ್ಲಿ 2.80 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ನಿದ್ದೆ ಮಾಡುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಆರೋಪಿಸಿದ್ದಾರೆ.

ಶಿಕ್ಷಣ ಇಲಾಖೆ, 79,694 ಹುದ್ದೆಗಳು ಖಾಲಿ, ಕಂದಾಯ ಇಲಾಖೆಯ 10,867 ಹುದ್ದೆಗಳು ಖಾಲಿ, ಗ್ರಾಮೀಣಾಭಿವೃದ್ಧಿ ಇಲಾಖೆಯ10,504 ಹುದ್ದೆಗಳು ಖಾಲಿ,  ಆರೋಗ್ಯ ಇಲಾಖೆಯ 37,572 ಹುದ್ದೆಗಳು ಖಾಲಿ, ಉನ್ನತ ಶಿಕ್ಷಣ ಇಲಾಖೆಯ 13,599 ಹುದ್ದೆಗಳು ಖಾಲಿ ಇದೆ.

- Advertisement - 

ಒಳಾಡಳಿತ ಇಲಾಖೆಯ 28,188 ಹುದ್ದೆಗಳು ಖಾಲಿ, ಅರಣ್ಯ ಇಲಾಖೆಯ 6,478 ಹುದ್ದೆಗಳು ಖಾಲಿ, ಆರ್ಥಿಕ ಇಲಾಖೆಯ 7,668 ಹುದ್ದೆಗಳು ಖಾಲಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ  11,020 ಹುದ್ದೆಗಳು ಖಾಲಿ, ಪರಿಶಿಷ್ಟ ಜಾತಿಗಳ ಕಲ್ಯಾಣ ಇಲಾಖೆಯ 9,646 ಹುದ್ದೆಗಳು ಖಾಲಿ, ಸಿಬ್ಬಂದಿ & ಆಡಳಿತ ಸುಧಾರಣೆ ಇಲಾಖೆಯ 6,190 ಹುದ್ದೆಗಳು ಖಾಲಿ ಇವೆ.

ಸಿಎಂ ಸಿದ್ದರಾಮಯ್ಯ ನವರ ಆಡಳಿತದಲ್ಲಿ.. ನೇಮಕಾತಿ ಆರಂಭಿಸಿಲ್ಲ, ಯುವಕರಿಗೆ ಉದ್ಯೋಗವಿಲ್ಲ ಭವಿಷ್ಯ ಇಲ್ಲ ಎಂದು ಸೋಮಣ್ಣ ದೂರಿದರು.

- Advertisement - 

ಕುರ್ಚಿ ಉಳಿಸಿಕೊಳ್ಳಲು ಪೈಪೋಟಿಗೆ ಬಿದ್ದಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇಹೈಕಮಾಂಡ್ ಓಲೈಸುವುದು ಬಿಡಿ, ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ ಎಂದು ಸೋಮಣ್ಣ ತಾಕೀತು ಮಾಡಿದ್ದಾರೆ.

 

 

Share This Article
error: Content is protected !!
";