ಇಂದು ಚಿತ್ರದುರ್ಗಕ್ಕೆ ವಿಶ್ವ ಭುವನ ಸುಂದರಿ ಡಾ.ಶೃತಿ ಹೆಗ್ಗಡೆ ಆಗಮನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ವಿಶ್ವ ಸೋರಿಯಾಸಿಸ್ ದಿನಾಚರಣೆ ಪ್ರಯುಕ್ತ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಚರ್ಮರೋಗ ತಜ್ಞರ ಸಂಘದಿಂದ ಅ.೨೯ ರಂದು ಸಾರ್ವಜನಿಕರಿಗೆ ಅರಿವು ಮತ್ತು ತಿಳುವಳಿಕೆ ಮೂಡಿಸುವುದಕ್ಕಾಗಿ ಸೈಕ್ಲಥಾನ್ ಹಮ್ಮಿಕೊಳ್ಳಲಾಗಿದೆ.

ಸೋರಿಯಾಸಿಸ್ ಚರ್ಮ ಕಾಯಿಲೆ ಮತ್ತು ಸಹವರ್ತಿ ರೋಗಗಳ ಸರಣಿ ಪ್ರಕ್ರಿಯೆ ಎಂಬ ಧ್ಯೇಯ ವಾಕ್ಯದೊಂದಿಗೆ ಒನಕೆ ಓಬವ್ವ ವೃತ್ತದಲ್ಲಿ ಅ.೨೯ ರ ಬೆಳಿಗ್ಗೆ ೭ ಗಂಟೆಗೆ  ಸೈಕ್ಲಥಾನ್ ಉದ್ಘಾಟಿಸಲಾಗುವುದು.

- Advertisement - 

ವಿಶ್ವ ಭುವನ ಸುಂದರಿ ಡಾ.ಶೃತಿ ಹೆಗ್ಗಡೆ ಆಗಮಿಸಲಿದ್ದಾರೆ. ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ, ಡಾ.ಜಿ.ಎನ್.ಪ್ರಶಾಂತ್, ಡಾ.ರಾಜೇಶ್ ಎಂ.ಎಸ್. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರವೀಂದ್ರ, ಡಾ.ಎಂ.ಯೋಗೇಂದ್ರ ಇವರುಗಳು ಭಾಗವಹಿಸಲಿದ್ದಾರೆ.

ಬಸವೇಶ್ವರ ಆಸ್ಪತ್ರೆಯ ಪ್ರಾಂಗಣದಲ್ಲಿ ಬೆಳಿಗ್ಗೆ ೧೦-೩೦ ಕ್ಕೆ ವಿಶ್ವ ಸೋರಿಯಾಸಿಸ್ ದಿನಾಚರಣೆಯನ್ನು ಏರ್ಪಡಿಸಲಾಗಿದೆ. ಸೋರಿಯಾಸಿಸ್ ರೋಗ, ಅದರ ಗುಣ ಲಕ್ಷಣಗಳು, ಉಲ್ಬಣಗೊಳ್ಳಲು ಕಾರಣಗಳು

- Advertisement - 

ಮತ್ತು ಲಭ್ಯವಿರುವ ಆಧುನಿಕ ಚಿಕಿತ್ಸೆ ಮತ್ತು ರೋಗಿಗಳು ಅನುಸರಿಸಬೇಕಾದ ಕ್ರಮಗಳು ಹಾಗೂ ಸೋರಿಯಾಸಿಸ್ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಲಾಗುವುದು. ಜಗತ್ತಿನಾದ್ಯಂತ ಸುಮಾರು ೭೦ ದೇಶಗಳಲ್ಲಿ ವಿಶ್ವ ಸೋರಿಯಾಸಿಸ್ ದಿನಾಚರಣೆ ಆಚರಿಸಲಾಗುವುದು.

 

Share This Article
error: Content is protected !!
";