ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲೂಕಿನಲ್ಲಿ1350ಕ್ಕೂ ಹೆಚ್ಚು ಕಾರ್ಡ್ ಗಳು ರದ್ದಾಗಿದ್ದು, ಶ್ರೀಮಂತರ ಒಂದೇ ಒಂದು ಕಾರ್ಡ್ ರದ್ದಾಗಿಲ್ಲ, ರದ್ದಾಗಿರುವ ಅಷ್ಟು ಕಾರ್ಡ್ ಗಳು ಕಡುಬಡವರಾಗಿದ್ದು,
ಸರ್ಕಾರದ ಕ್ರಮದಿಂದದಾಗಿ ಬಡವರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ, ಈ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರವನ್ನ ಪ್ರಶ್ನೆ ಮಾಡುವುದ್ದಾಗಿ ಶಾಸಕರಾದ ಧೀರಜ್ ಮುನಿರಾಜು ತಿಳಿಸಿದರು.
ದೊಡ್ಡಬಳ್ಳಾಪುರ ತಾಲೂಕು ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಕಾರ್ಯಾಲಯವನ್ನ ಉದ್ಘಾಟಿಸಿದ ಅವರು ನಂತರ ಮಾಧ್ಯಮದೊಂದಿಗೆ ಮಾತನಾಡಿದರು, BPL ಕಾರ್ಡ್ ರದ್ದು ಮಾಡುತ್ತಿರುವ ಸರ್ಕಾರದ ಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು,
ದೊಡ್ಡಬಳ್ಳಾಪುರ ತಾಲೂಕಿನಲ್ಲಿ 1350 ಹೆಚ್ಚು BPL ಕಾರ್ಡ್ ಗಳು ರದ್ದಾಗಿದೆ, ಐಟಿ, ಜಿಎಸ್ ಟಿ, ಸಾಲ ತೆಗೆದುಕೊಂಡಿರುವ ಅಂಶಗಳ ಮೇಲೆ BPL ಕಾರ್ಡ್ ಗಳನ್ನ ರದ್ದು ಮಾಡಲಾಗಿದೆ, ಆದರೆ ಈ ಮಾನದಂಡಗಳು ಅವೈಜ್ಞಾನಿಕವಾಗಿದ್ದು, ಇದರಿಂದ ಅರ್ಹ ಬಡವರಿಗೆ ಗೃಹಲಕ್ಷ್ಮೀ ಹಣ ಮತ್ತು ಅಕ್ಕಿ ಸಿಗದಂತೆ ಆಗಿದೆ ಎಂದರು.